ಸೋಮವಾರ, ಫೆಬ್ರವರಿ 24, 2020
19 °C

ಶ್ವಾನವಾಗಿ ಹುಟ್ಟಿ, ಯೋಧರಾಗಿ ನಿವೃತ್ತಿ: ಹೀಗೊಂದು ಕಹಾನಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

CISF Dog

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(CISF) ಭಾಗವಾಗಿದ್ದುಕೊಂಡು ಪ್ಯಾರಾ ಮಿಲಿಟರಿ ಪಡೆಯೊಂದಿಗೆ ಎಂಟು ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತಗೊಂಡ ಶ್ವಾನಗಳಿಗೆ  ಮಂಗಳವಾರ ಪೂರ್ಣ ಗೌರವಗಳೊಂದಿಗೆ ಬೀಳ್ಕೊಡುಗೆ ನೀಡಲಾಯಿತು.

ಈ ಕುರಿತು ಸಿಐಎಸ್ಎಫ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, "ಶ್ವಾನವಾಗಿ ಜನಿಸಿದ, ಸೈನಿಕನಾಗಿ ನಿವೃತ್ತರಾದ" ಎಂದು ಶ್ವಾನಗಳನ್ನು ಗೌರವಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದೆ.  ದೆಹಲಿ ಮೆಟ್ರೊಗೆ ನಿಯೋಜಿಸಲಾಗಿದ್ದ ಸಿಐಎಸ್ಎಫ್ ತಂಡದ ಭಾಗವಾಗಿ ಶ್ವಾನಗಳು ಕಾರ್ಯನಿರ್ವಹಿಸಿದ್ದವು.  ದೆಹಲಿ ಮೆಟ್ರೊದ ಸಿಐಎಸ್ಎಫ್ ಘಟಕ (ಡಿಎಂಆರ್‌ಸಿ) ಆಯೋಜಿಸಿದ್ದ ಸಮಾರಂಭದಲ್ಲಿ ಶ್ವಾನಗಳಿಗೆ ಮೆಮೆಂಟೋ, ಪದಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. 

ವರದಿಗಳ ಪ್ರಕಾರ, ಸಿಐಎಸ್‌ಎಫ್ ಅದರ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ "ನಿವೃತ್ತಿ" ಕಾರ್ಯಕ್ರಮವನ್ನು ಶ್ವಾನಗಳಿಗಾಗಿ ಆಯೋಜಿಸಿತ್ತು. ಸಿಐಎಸ್‌ಎಫ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶ್ವಾನಗಳ ಸಮರ್ಪಣೆ ಮತ್ತು ಶ್ರದ್ಧೆಯನ್ನು ಅಭಿನಂದಿಸಿ ಬೀಳ್ಕೊಡುಗೆ ಸಂದೇಶವನ್ನು ಪೋಸ್ಟ್ ಮಾಡಿದೆ.

ತರಬೇತಿ ಪಡೆದಿದ್ದ ಶ್ವಾನಗಳು ತಮ್ಮ ನಿಸ್ವಾರ್ಥ ಕರ್ತವ್ಯಕ್ಕಾಗಿ ಸಮಾರಂಭದಲ್ಲಿ ವಿಶೇಷ ಔತಣವನ್ನು ಪಡೆದವು. ಸಮಾರಂಭದ ಬಳಿಕ ಅವುಗಳನ್ನು ದೆಹಲಿ ಮೂಲದ ಎನ್‌ಜಿಒವೊಂದಕ್ಕೆ ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು