ಉಗ್ರರ ಮಟ್ಟಹಾಕಲು ಭಾರತಕ್ಕೆ ಪೂರ್ಣ ಸಹಕಾರ: ಇಂಗ್ಲೆಂಡ್‌ ಎನ್‌ಎಸ್‌ಎ

ಬುಧವಾರ, ಮಾರ್ಚ್ 20, 2019
31 °C

ಉಗ್ರರ ಮಟ್ಟಹಾಕಲು ಭಾರತಕ್ಕೆ ಪೂರ್ಣ ಸಹಕಾರ: ಇಂಗ್ಲೆಂಡ್‌ ಎನ್‌ಎಸ್‌ಎ

Published:
Updated:

ನವದೆಹಲಿ: ಭಯೋತ್ಪಾದನೆ ನಿರ್ಮೂಲನೆಗೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದು ಸೇರಿದಂತೆ ಎಲ್ಲಾ ಬಗೆಯ ಸಹಕಾರವನ್ನು ಭಾರತಕ್ಕೆ ನೀಡುವುದಾಗಿ ಇಂಗ್ಲೆಂಡ್‌ ಹೇಳಿದೆ.

ಈ ಸಂಬಂಧ ಇಂಗ್ಲೆಂಡ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ) ಮಾರ್ಕ್‌ ಸೆಡ್ವಿಲ್‌ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಜತೆ ಮಾತನಾಡಿದ್ದಾರೆ. 

ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ಭಾರತಕ್ಕೆ ಬೆಂಬಲ ಸೂಚಿಸಿ ಮಾರ್ಕ್‌ ಸೆಡ್ವಿಲ್‌ ದೂರವಾಣಿ ಮೂಲಕ ಮಾತನಾಡಿ, ಭಯೋತ್ಪಾದನೆ ನಿಗ್ರಹಿಸುವ ವಿಷಯದಲ್ಲಿ ಒಗ್ಗಟ್ಟನ್ನು ತೋರಿದ್ದಾರೆ.

‘ಭಾರತ ಉಗ್ರರ ವಿರುದ್ಧದ ಯಾವುದೇ ಬಗೆಯ ಕ್ರಮ ಕೈಗೊಂಡರೂ ಅದಕ್ಕೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದು ಸೇರಿದಂತೆ ಎಲ್ಲಾ ರೀತಿಯ ಸಹಕಾರವನ್ನು ಇಂಗ್ಲೆಂಡ್‌ ಭಾರತಕ್ಕೆ ನೀಡಲಿದೆ’ ಎಂದು ಅಲ್ಲಿನ ಎನ್‌ಎಸ್‌ಎ ಹೇಳಿದ್ದಾಗಿ ಮೂಲಗಳು ಗುರುವಾರ ತಿಳಿಸಿವೆ.

ಪುಲ್ವಾಮದಲ್ಲಿ ಪಾಕಿಸ್ತಾನ ಮೂಲದ ಉಗ್ರರು ನಡೆಸಿದ ದಾಳಿಗೆ ಭಾರತೀಯ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದಾರೆ. ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿದೆ.

ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ವಾಯು ದಾಳಿ ನಡೆಸಿ, ಉಗ್ರರ ತಾಣಗಳನ್ನು ಧ್ವಂಸಗೊಳಿಸಿದೆ.

ಇದಾದ ಮರುದಿನ ಪಾಕಿಸ್ತಾನ ಭಾರತೀಯ ಸೇನಾ ಕೇಂದ್ರಗಳನ್ನು ಗುರಿಯಾಗಿರಿಸಿ ದಾಳಿಗೆ ಯತ್ನಿಸಿತು. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ವಾಯುಪಡೆ ಪಾಕಿಸ್ತಾನದ ಎಫ್‌–16 ವಿಮಾನವನ್ನು ಹೊಡೆದುರುಳಿಸಿತು.

* ಇವನ್ನೂ ಓದಿ...

ಸರ್ಕಾರಕ್ಕೆ ಬಾಲಾಕೋಟ್ ದಾಳಿಯ ಸಾಕ್ಷ್ಯ ಸಲ್ಲಿಕೆ

ಜಮ್ಮು ಬಸ್‌ನಿಲ್ದಾಣದಲ್ಲಿ ಗ್ರೆನೇಡ್‌ ಸ್ಫೋಟ: 30 ಮಂದಿಗೆ ಗಾಯ, ಒಬ್ಬರು ಸಾವು​

ಅಭಿನಂದನ್ ವರ್ಧಮಾನ್‍ಗೆ ಟ್ವಿಟರ್, ಇನ್‍ಸ್ಟಾಗ್ರಾಂ, ಫೇಸ್‍ಬುಕ್ ಖಾತೆ ಇಲ್ಲ​

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !