ಮಂಗಳವಾರ, ಆಗಸ್ಟ್ 11, 2020
22 °C

ಅಭಿನಂದನ್ ವರ್ಧಮಾನ್‍ಗೆ ಟ್ವಿಟರ್, ಇನ್‍ಸ್ಟಾಗ್ರಾಂ, ಫೇಸ್‍ಬುಕ್ ಖಾತೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ ಅವರು ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತು ಟ್ವಿಟರ್ ಖಾತೆ ಹೊಂದಿಲ್ಲ. ಅವರ ಹೆಸರಿನಲ್ಲಿರುವ ಫೇಕ್ ಖಾತೆಗಳನ್ನು ಫಾಲೋ ಮಾಡುವ ಮೂಲಕ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: ‘ಪಾಕಿಸ್ತಾನದ ಪರವಾಗಿ ಯುದ್ಧ ಮಾಡುವೆ’–ಇದು ಪೈಲಟ್‌ ಅಭಿನಂದನ್‌ ಹೆಸರಿನ ನಕಲಿ ಖಾತೆ

ಪಾಕ್ ವಶದಲ್ಲಿದ್ದ ಅಭಿನಂದನ್ ಅವರು ಮಾರ್ಚ್ 1ರಂದು ಭಾರತಕ್ಕೆ ವಾಪಸ್ ಆದ ಕೂಡಲೇ ಅಭಿನಂದನ್ ಹೆಸರಿನಲ್ಲಿ  ಹಲವಾರು ನಕಲಿ ಖಾತೆಗಳು ಸೃಷ್ಟಿಯಾಗಿದ್ದವು.  ಉತ್ತರ ಪ್ರದೇಶದಲ್ಲಿನ ಯುವಕನೊಬ್ಬ ಅಭಿನಂದನ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಪಾಕಿಸ್ತಾನದ ಪರ ಪೋಸ್ಟ್ ಹಾಕಿದ್ದಕ್ಕಾಗಿ ಆತನ  ವಿರುದ್ಧ ಕೇಸು ದಾಖಲಾಗಿದೆ. 

ಅಭಿನಂದನ್ ಹೆಸರಿನ ಫೇಕ್ ಖಾತೆಗಳ ಬಗ್ಗೆ ಭಾರತ ಸರ್ಕಾರದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ನಕಲಿ ಖಾತೆಗಳು ಇನ್ನೂ ಸಕ್ರಿಯವಾಗಿದೆ.

 ಇಂಥಾ ನಕಲಿ ಖಾತೆಗಳನ್ನು ಫಾಲೋ ಮಾಡಬೇಡಿ ಎಂದ ಭಾರತೀಯ ವಾಯುಪಡೆ, ತಪ್ಪು ಮಾಹಿತಿಗಳನ್ನು  ಪೋಸ್ಟ್ ಮಾಡುತ್ತಿರುವ ಖಾತೆಗಳ ಹೆಸರನ್ನು ಕೂಡಾ ಟ್ವೀಟ್ ಮಾಡಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು