ಬಜೆಟ್ | ರಾಜ್ಯಗಳಿಗೆ ಸಮಾನ ವಿದ್ಯುತ್‌ಗಾಗಿ ‘ಒನ್‌ ನೇಷನ್‌ ಒನ್‌ ಗ್ರಿಡ್‌’ ಯೋಜನೆ

ಮಂಗಳವಾರ, ಜೂಲೈ 23, 2019
25 °C

ಬಜೆಟ್ | ರಾಜ್ಯಗಳಿಗೆ ಸಮಾನ ವಿದ್ಯುತ್‌ಗಾಗಿ ‘ಒನ್‌ ನೇಷನ್‌ ಒನ್‌ ಗ್ರಿಡ್‌’ ಯೋಜನೆ

Published:
Updated:

ನವದೆಹಲಿ: ದೇಶದಲ್ಲಿನ ವಿದ್ಯುತ್‌ ಕೊರತೆ ಹಾಗೂ ವಿತರಣೆ ಸಮಸ್ಯೆ ನಿವಾರಣೆಗೆ ಹಾಗೂ ವಿದ್ಯುತ್ ಮೂಲ ಸೌಕರ್ಯ ಒದಗಿಸಲು ‘ಒನ್‌ ನೇಷನ್‌ ಒನ್‌ ಗ್ರಿಡ್‌’ ಯೋಜನೆಯನ್ನು ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದರು.

ಗ್ಯಾಸ್‌ ಗ್ರಿಡ್‌, ವಾಟರ್‌ ಗ್ರಿಡ್‌ ನಿರ್ಮಾಣಕ್ಕೂ ನಿರ್ಧಾರ ಮಾಡಲಾಗಿದೆ ಎಂದು ಪ್ರಕಟಿಸಿದರು.

ನೀರು, ಗ್ಯಾಸ್‌, ರಸ್ತೆ ಸೇರಿದಂತೆ ಮೂಲ ಸೌಕರ್ಯಕ್ಕೆ ಒತ್ತು ನೀಡಲು ಕ್ರಮ ಕೈಗೊಳ್ಳಲಾಗಿದೆ.

ಬಜೆಟ್‌ನ ಪ್ರಮುಖ ಅಂಶಗಳು

* ಪಿಪಿಸಿ ಮಾದರಿಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಅಧ್ಯತೆ

* ರಾಜ್ಯ ಕೇಂದ್ರ ಸರ್ಕಾರದಗಳ ಸಹಭಾಗಿತ್ವದಲ್ಲಿ ಸರ್‌ ಚಾರ್ಜ್‌ ತೊಲಗಿಸಲು ಕ್ರಮ

* ಎಲೆಕ್ಟ್ರಿಕ್‌ ವಾಹನಗಳ ಮೂಲಕ ಪರಿಸರ ಉಳಿವಿಗೆ ಕ್ರಮ

* ರೈಲ್ವೆ | ಖಾಸಗಿ ಮತ್ತು ಸರ್ಕಾರದ ಸಭಾಗಿತ್ವದಲ್ಲಿ ಸೌಲಭ್ಯ ಕಲ್ಪಿಸುವುದು

* ಹೆಚ್ಚಿನ ಗೃಹ ನಿರ್ಮಾಣಕ್ಕೆ ಆಧ್ಯತೆ

* 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿಗಾಗಿ ‘ಪ್ರಧಾನಮಂತ್ರಿ ಕರಮ್‌ ಯೋಗಿ ಮಾನ್‌ ಧನ್‌ ಸಮ್ಮಾನ್‌’ ಯೋಜನೆ.

* ಉಜ್ವಲ ಯೋಜನೆ ಮತ್ತು ಸೌಭಾಗ್ಯ ಯೋಜನೆ ಅಡಿ ಗ್ರಾಮೀಣ ಪ್ರತಿ ಕಟುಂಬಕ್ಕೆ ಗ್ಯಾಸ್‌ ಮತ್ತು ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

* ಪ‍್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಅಡಿ 2020–21ರ ವೇಳೆಗೆ 1.95 ಕೋಟಿ ಮನೆ ನಿರ್ಮಾಣಕ್ಕೆ ಕ್ರಮ.

* ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅನ್ನದಾತನನ್ನು ಶಕ್ತಿದಾತನನ್ನಾಗಿ ಮಾಡಲಾಗುವುದು, ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು

* ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ ನೀಡಲಾಗುವುದು

* ಬಿದಿರು, ಖಾದಿ, ಜೇನು ಉದ್ಯಮಗಳೀಗೆ ಸರ್ಕಾರ ಹಣಕಾಸು ನೆರವು ನೀಡುವ ಮೂಲಕ ಉತ್ತೇಜಿಸಲಾಗುವುದು

* ಮುಂದಿನ 5 ವರ್ಷಗಳಲ್ಲಿ 25 ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುವುದು

* 2018ರಿಂದ 2030ರ ಅವಧಿಯಲ್ಲಿ ರೈಲ್ವೆ ಅಭಿವೃದ್ಧಿಗೆ ಅಗತ್ಯವಿರುವ ₹50 ಲಕ್ಷ ಕೋಟಿಯನ್ನು ಪಿಪಿಪಿ (ಸಾರ್ವಜನಿಕ, ಖಾಸಗಿ ಸಹಭಾಗಿತ್ವ) ಅಡಿಯಲ್ಲಿ ಹೊಂದಿಸಿಕೊಳ್ಳಲು ಚಿಂತನೆ.

* ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆ ಅಡಿಯಲ್ಲಿ 1.95 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು

* ಉಜ್ವಲ ಯೋಜನೆ ಅಡಿಯಲ್ಲಿ 7.5 ಕೋಟಿ ಕುಟುಂಬಕ್ಕೆ ಎಲ್‌ಪಿಜಿ ಗ್ಯಾಸ್‌ ಸೌಕರ್ಯ

* ಮಾಧ್ಯಮ, ಅನಿಮೇಶನ್‌, ವಿಮಾನಯಾನ, ವಿಮಾ ಕ್ಷೇತ್ರಗಳಲ್ಲಿ ಶೇ 100 ವಿದೇಶಿ ಹೂಡಿಕೆಗೆ ಚಿಂತನೆ

* ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ₹24 ಸಾವಿರ ಕೋಟಿ ಅನುದಾನ ನೀಡಲಾಗುವುದು.

* ಭಾರತದಲ್ಲಿ ಎನ್‌ಆರ್‌ಐಗಳ ಹೂಡಿಕೆ ಹೆಚ್ಚಿದೆ, ಎನ್‌ಆರ್‌ಐಗಳನ್ನು ಆಕರ್ಷಿಸಲು ಹಲವು ಯೋಜನೆಗಳನ್ನು ರೂಪಿಸಲಾಗುವುದು

* ವಿಮಾ ಕ್ಷೇತ್ರದಲ್ಲಿ ಶೇ 100ರಷ್ಟು ಎಫ್‌ಡಿಐ ಹೂಡಿಕೆಗೆ ಅನುಮತಿ

* ಭಾರತದಲ್ಲಿ ಎಫ್‌ಡಿಐ ಹೂಡಿಕೆದಾರರನ್ನು ಆಕರ್ಷಿಸಲು ನೂತನ ಯೋಜನೆಗಳನ್ನು ರೂಪಿಸಲಾಗುವುದು.

* ಎಂಎಸ್‌ಒಇಗಳಿಗೆ ₹350 ಕೋಟಿ ಸಾಲ ನೀಡಿಕೆ

* ಇವನ್ನೂ ಓದಿ...

ಹಣಕಾಸು ಸಚಿವೆ ನಿರ್ಮಲಾ ಅವರಿಂದ ಬಜೆಟ್‌ ಮಂಡನೆ ಆರಂಭ 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !