ಮಂಗಳವಾರ, ಮಾರ್ಚ್ 28, 2023
33 °C

ಚಿನ್ನ ತಿಂದ ಬಿಡಾಡಿ ದನ: ಸಗಣಿಯಿಂದ ಮರಳಿ ಪಡೆಯುವ ವಿಶ್ವಾಸದಲ್ಲಿ ಕುಟುಂಬ

ಎಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಿರ್ಸಾ (ಹರಿಯಾಣ): ಬಿಡಾಡಿ ದನವೊಂದು 40 ಗ್ರಾಂ ತೂಕದ ಚಿನ್ನಾಭರಣಗಳನ್ನು ತಿಂದಿರುವ ಘಟನೆ ಹರಿಯಾಣ ರಾಜ್ಯದಲ್ಲಿ ನಡೆದಿದೆ.

ಸಿರ್ಸಾ ನಿವಾಸಿ ಜನಕರಾಜ್‌ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.  ಜನಕರಾಜ್‌ ಅವರ ಪತ್ನಿ ಹಾಗೂ ಸೊಸೆ ಚಿನ್ನದ ಅಭರಣಗಳನ್ನು ಬಿಚ್ಚಿ ತರಕಾರಿ ಹಾಕುವ ಡಬ್ಬಿಯಲ್ಲಿ ಹಾಕಿದ್ದಾರೆ. ನಂತರ ಅಡುಗೆ ಮಾಡಿದ ತ್ಯಾಜ್ಯ ತರಕಾರಿಯನ್ನು ಚಿನ್ನಾಭರಣ ಹಾಕಿದ್ದ ಡಬ್ಬಿಯಲ್ಲಿ ಹಾಕಿದ್ದಾರೆ. ಬಳಿಕ ಅದನ್ನು ಮನೆ ಮುಂದೆ ಇಡುವ ಕಸದ ಬುಟ್ಟಿಗೆ ಎಸೆದಿದ್ದಾರೆ. 

ಈ ವೇಳೆ ಬೀದಿ ದನವೊಂದು ಬಂದು ಆ ವೇಸ್ಟ್‌ ತರಕಾರಿಯಲ್ಲಿ ಸೇರಿದ್ದ ಆಭರಣಗಳನ್ನು ತಿಂದಿದೆ. ಇದು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಪರಿಶೀಲಿಸಿದ ಜನಕರಾಜ್‌ ಆ ಬೀದಿ ದನವನ್ನು ಹುಡುಕಿ ತಂದು ಮನೆಯ ಮುಂದೆ ಕಟ್ಟಿಹಾಕಿ, ನಂತರ ಪಶುವೈದ್ಯರಿಗೆ ಮಾಹಿತಿ ನೀಡಿದ್ದಾರೆ. 

ದನದ ಸಗಣಿಯ ಮೂಲಕ ಆಭರಣಗಳನ್ನು ವಾಪಾಸು ಪಡೆಯುವ ವಿಶ್ವಾಸದಲ್ಲಿ ಜನಕರಾಜ್‌ ಇದ್ದಾರೆ. ಈ ಕಾರಣಕ್ಕಾಗಿಯೇ ಆ ಬೀದಿ ದನವನ್ನು ಮನೆಯ ಮುಂಭಾಗದಲ್ಲಿ ಕಟ್ಟಿ ಹಾಕಿ ಮೇವು ಹಾಕುತ್ತಿದ್ದು ನಿತ್ಯವೂ ಅದರ ಸಗಣಿಯನ್ನು ಪರೀಕ್ಷೆ ಮಾಡುತ್ತಿರುವುದಾಗಿ ಜನಕರಾಜ್‌ ಹೇಳಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿ ಎನ್‌ಡಿಟಿವಿ ವರದಿ ಮಾಡಿದೆ. 

ಆ ಬಿಡಾಡಿ ದನವನ್ನು ಗೋಶಾಲೆಗೆ ಬಿಟ್ಟರೆ ಮತ್ತೆ ಚಿನ್ನಾಭರಣ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಜನಕರಾಜ್‌ ಹೇಳುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು