ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸಿಎಎ ವಿರೋಧಿ ಪ್ರತಿಭಟನೆ: ಶಾಹಿನ್ ಬಾಗ್ ನಂತರ ಜಫರಾಬಾದ್ ರಸ್ತೆ ಬಂದ್

Last Updated 23 ಫೆಬ್ರುವರಿ 2020, 5:30 IST
ಅಕ್ಷರ ಗಾತ್ರ

ನವದೆಹಲಿ:ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಭಾನುವಾರ ಸುಮಾರು 500 ಮಹಿಳೆಯರು ಪ್ರತಿಭಟನೆ ಆರಂಭಿಸಿದ ಪರಿಣಾಮ ದೆಹಲಿಯ ಜಫರಾಬಾದ್ ಪ್ರಮುಖ ರಸ್ತೆಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಪರಿಣಾಮ ದೆಹಲಿ ಜಫರಾಬಾದ್ಮೆಟ್ರೋ ನಿಲ್ದಾಣದಲ್ಲಿರೈಲು ನಿಲುಗಡೆಮಾಡದೆ ಸಂಚಾರ ನಡೆಸಿದೆ. ಈ ಸಂಬಂಧ ದೆಹಲಿ ಮೆಟ್ರೋ ರೈಲು ನಿಗಮ ಟ್ವೀಟ್ ಮಾಡಿದ್ದು, ಈ ನಿಲ್ದಾಣದಲ್ಲಿ ಒಳಪ್ರವೇಶ ಹಾಗೂ ಹೊರ ಹೋಗುವ ಬಾಗಿಲುಗಳನ್ನು ಬಂದ್ ಮಾಡಿದ್ದು, ಇಲ್ಲಿ ರೈಲು ನಿಲುಗಡೆ ಇರುವುದಿಲ್ಲ ಎಂದು ತಿಳಿಸಿದೆ.

ಈಶಾನ್ಯ ದೆಹಲಿಯಜಫರಾಬಾದ್ ಮೆಟ್ರೋ ರೈಲು ನಿಲ್ದಾಣದ ಸಮೀಪವೇ ಸುಮಾರು 500 ಮಹಿಳೆಯರು ಭಾನುವಾರ ಪ್ರತಿಭಟನೆ ಆರಂಭಿಸಿದ್ದಾರೆ.ದೆಹಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶನಿವಾರ ರಾತ್ರಿಯಿಂದಲೇ ಜಫರಾಬಾದ್ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿರುವ ಮಹಿಳೆಯರು ಭಾನುವಾರ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ಮಹಿಳೆಯರು ಜಫರಾಬಾದ್ ರಸ್ತೆ ನಂ 66 ಬಂದ್ ಮಾಡಿದ್ದು, ಇದರಿಂದಾಗಿ ಸೀಲಾಂಪುರ್ದಿಂದ ಮಾಜ್‌‌ಪುರ್ ಹಾಗೂ ಯಮುನಾ ವಿಹಾರ್ ಸಂಪರ್ಕ ಕಡಿತಗೊಂಡಿದೆ. ಪ್ರತಿಭಟನಾಕಾರರ ಮತ್ತೊಂದು ತಂಡ ಸೀಲಾಂಪುರ್ ರಸ್ತೆ, ಕರ್ದಾಂಪುರಿ ರಸ್ತೆಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದು, ಈ ಭಾಗದ ವಾಹನ ಸವಾರರು ಪರದಾಡುತ್ತಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್‌‌ಸಿ) ವಿರೋಧಿಸಿ ಕಳೆದ ಎರಡು ತಿಂಗಳಿಂದ ಶಾಹಿನ್ಬಾಗ್ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಈ ಪ್ರದೇಶದಲ್ಲಿ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಪ್ರತಿಭಟನಾಕಾರರ ಮನವೊಲಿಸಿ ಪರಿಹಾರ ಕಂಡು ಹಿಡಿಯಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸಂಧಾನಕಾರರನ್ನು ನಿಯುಕ್ತಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT