ಅಯೋಧ್ಯಾ: ಧ್ವಂಸಗೊಂಡ ಬಾಬರಿ ಮಸೀದಿಯ ಬಳಿ ಇರುವ 4- 5 ಎಕರೆ ಜಮೀನಿನಲ್ಲಿ ಮುಸ್ಲಿಮರ ಗೋರಿ ಇದೆ. ಶ್ರೀರಾಮನ ಮೇಲಿನ ಗೌರವ ಮತ್ತು ಮಾನವೀಯತೆಯ ದೃಷ್ಟಿಯಿಂದ ಆ ಜಮೀನನ್ನು ದೇವಾಲಯ ನಿರ್ಮಾಣಕ್ಕೆ ಬಳಸಬೇಡಿ ಎಂದು ಸುಪ್ರೀಂಕೋರ್ಟ್‌ನಹಿರಿಯ ನ್ಯಾಯವಾದಿ ಎಂ.ಆರ್ ಶಮ್ಶಾದ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ.

ಅಯೋಧ್ಯೆಯಲ್ಲಿರುವ ಮುಸ್ಲಿಮರ ಪರವಾಗಿ ಶಮ್ಶಾದ್ ಅವರು ಪತ್ರ ಬರೆದಿದ್ದು, ಬಾಬರಿ ಮಸೀದಿಯ ಸುತ್ತಲಿರುವ ಸ್ಮಶಾನದ ಜಮೀನನ್ನು ಸನಾತನ ಧರ್ಮದ ಸಲುವಾಗಿ ಬಿಟ್ಟುಬಿಡಬೇಕು ಎಂದಿದ್ದಾರೆ.
ಮುಸ್ಲಿಮರ ಪ್ರಕಾರ ಅಲ್ಲಿರುವ ಸ್ಮಶಾನವು ಗಂಜ್ ಶಹಿದಾನ್ ಎಂದು ಕರೆಯಲ್ಪಡುತ್ತದೆ. 1885ರಲ್ಲಿ ಅಯೋಧ್ಯೆಯಲ್ಲಿ ನಡೆದ ಗಲಭೆಯಲ್ಲಿ ಪ್ರಾಣ ಕಳೆದುಕೊಂಡ 75 ಮುಸ್ಲಿಮರನ್ನು ಇಲ್ಲಿ ದಫನ ಮಾಡಲಾಗಿದೆ. ಫೈಜಾಬಾದ್ ಗಜೆಟಿಯರ್‌ನಲ್ಲಿಯೂ ಇದರ ಉಲ್ಲೇಖವಿದೆ.

ಕೇಂದ್ರ ಸರ್ಕಾರವು ಸ್ಮಶಾನದ ಜಮೀನನ್ನು ಪರಿಗಣಿಸದೆ ಶ್ರೀರಾಮನಿಗೆ ಬೃಹತ್ ದೇವಾಲಯ ನಿರ್ಮಿಸಲು ಆದೇಶಿಸಿದೆ. ಇದು ಧರ್ಮದ ಉಲ್ಲಂಘನೆ. ಸನಾತನ ಧರ್ಮದ ಪ್ರಕಾರ ಮುಸ್ಲಿಮರ ಗೋರಿ ಮೇಲೆ ಶ್ರೀರಾಮನ ದೇವಾಲಯದ ಅಡಿಪಾಯ ಇರಲು ಸಾಧ್ಯವೇ? ಈ ನಿರ್ಧಾರವನ್ನು ಟ್ರಸ್ಟ್‌ನ ವ್ಯವಸ್ಥಾಪಕರು ತೆಗೆದುಕೊಳ್ಳಬೇಕಿದೆ ಎಂದು ಪತ್ರದಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.