ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸಂಗೀತದಲ್ಲಿ ಅಡ್ವಾನ್ಸ್ಡ್ ಡಿಪ್ಲೊಮಾ

Last Updated 14 ಮೇ 2019, 18:14 IST
ಅಕ್ಷರ ಗಾತ್ರ

ಚೆನ್ನೈ: ಚೆನ್ನೈನ‘ದಿ ಮ್ಯೂಸಿಕಲ್‌ ಅಕಾಡೆಮಿ ಮದ್ರಾಸ್‌’ನವರು ಆಯೋಜಿಸುವ 3 ವರ್ಷ ಅವಧಿಯ ‘ಅಡ್ವಾನ್ಸ್ಡ್‌ ಡಿಪ್ಲೊಮಾ ಇನ್‌ ಕರ್ನಾಟಕ್‌ ಮ್ಯೂಸಿಕ್‌’ ಕೋರ್ಸ್‌ನ ಪ್ರವೇಶಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ಸೋಮವಾರ, ಗುರುವಾರ ಹಾಗೂ ಶುಕ್ರವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ. ಪ್ರತಿ ವರ್ಷ ಜುಲೈ ಮಧ್ಯದಿಂದ ನವೆಂಬರ್‌ ಅಂತ್ಯದವರೆಗೆ ಮತ್ತು ಜನವರಿಯಿಂದ ಜೂನ್‌ವರೆಗೆ ಎಂದು ಎರಡು ಸೆಮಿಸ್ಟರ್‌ಗಳಲ್ಲಿ ತರಬೇತಿ ನಡೆಯಲಿದೆ.

ವಿದ್ಯಾರ್ಹತೆ:ಕನಿಷ್ಠ 12ನೇ ತರಗತಿ (ಪಿಯುಸಿ) ತೇರ್ಗಡೆ ಆಗಿರುವ, 18ರಿಂದ 25 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ವರ್ಣ, ಕೃತಿಗಳನ್ನು ಹಾಡಲು ಬರಬೇಕು ಹಾಗೂ ತಕ್ಕಮಟ್ಟಿಗೆ ಸಂಗೀತದ ಮನೋಧರ್ಮ ಹೊಂದಿರಬೇಕು. ಅರ್ಜಿದಾರರು ತಾವು ಪಡೆದಿರುವ ಸಂಗೀತ ತರಬೇತಿಯ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಸ್ವ–ವಿವರದ ಪ್ರತಿಯನ್ನು ಕಳುಹಿಸಬೇಕು. ಆಯ್ದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.ಅರ್ಜಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸುವ ಕೊನೆ ದಿನ ಜೂನ್‌ 22.

ವಿವರಗಳಿಗೆ: ದಿ ಮ್ಯೂಸಿಕ್‌ ಅಕಾಡೆಮಿ ಮದ್ರಾಸ್‌, ನ್ಯೂ ನಂ. 168 (ಹಳೆಯ ಸಂಖ್ಯೆ 306), ಟಿಟಿಕೆ ರೋಡ್‌, ರೋಯಪೇಟ್‌, ಚೆನ್ನೈ, 600 014. ದೂರವಾಣಿ: 28112231, 28115162. ಇ–ಮೇಲ್‌ music@musicacademymadras.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT