ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮಣ್‌ ಅದೃಷ್ಟ ಈ ಬಾರಿ ಕೈಕೊಡಲಿದೆ: ಜೋಗಿ

Last Updated 13 ನವೆಂಬರ್ 2018, 20:15 IST
ಅಕ್ಷರ ಗಾತ್ರ

* ಚುನಾವಣೆ ಬಳಿಕ ಅಜಿತ್‌ ಜೋಗಿ ಎಲ್ಲಿರುತ್ತಾರೆ? ಬಿಜೆಪಿ, ಕಾಂಗ್ರೆಸ್‌ ಸ್ಥಾನಗಳು ಏನು?
ಛತ್ತೀಸಗಡ ಜನತಾ ಕಾಂಗ್ರೆಸ್‌ (ಜೆಸಿಸಿ), ಬಿಎಸ್‌ಪಿ ಮತ್ತು ಸಿಪಿಐ ಮೈತ್ರಿಕೂಟವು ಛತ್ತೀಸಗಡದಲ್ಲಿ ಸರ್ಕಾರ ರಚಿಸಲಿದೆ. ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವುದ ರಿಂದ ನಾನು ಸರ್ಕಾರದ ಅವಿಭಾಜ್ಯ ಅಂಗವಾಗಿರುತ್ತೇನೆ.

ಅಧಿಕಾರದಲ್ಲಿರುವ ಕಾರಣಕ್ಕೆ ಬಿಜೆಪಿಗೆ ಹಲವು ಅನುಕೂಲಗಳಿವೆ. ಆ ಪಕ್ಷದ ಬಳಿ ಅಪಾರ ಹಣವೂ ಇದೆ. ಇತರರ ಪರವಾಗಿರುವ ಏಕೈಕ ಅಂಶವೆಂದರೆ, ಬಿಜೆಪಿ ಎದುರಿಸಬೇಕಿರುವ ಆಡಳಿತ ವಿರೋಧಿ ಅಲೆ. ಜನರಿಗೆ ಬದಲಾವಣೆ ಬೇಕಾಗಿದೆ. ಜನರು ಬಯಸುವ ಪರ್ಯಾಯವನ್ನು ಮೈತ್ರಿಕೂಟವು ಒದಗಿಸಲಿದೆ.

ಕಾಂಗ್ರೆಸ್‌ ಬಿಕ್ಕಟ್ಟಿನಲ್ಲಿದೆ. ಆ ಪಕ್ಷ ಮುಖರಹಿತ, ಅದಕ್ಕೆ ನಾಯಕರೇ ಇಲ್ಲ. ಹಾಲಿ ಶಾಸಕರು ಸೋಲುವ ಪರಂಪರೆಯೇ ಛತ್ತೀಸಗಡದಲ್ಲಿ ಇದೆ. 2013ರ ಚುನಾವಣೆಯಲ್ಲಿ 35 ಶಾಸಕರ ಪೈಕಿ 27 ಮಂದಿ ಸೋತಿದ್ದರು. ಈ ಬಾರಿಯ ಚುನಾವಣೆಯ ಬಳಿಕ ಕಾಂಗ್ರೆಸ್‌ ಲೆಕ್ಕಕ್ಕಿಲ್ಲದ ಪಕ್ಷವಾಗಲಿದೆ.

* ಎರಡು ವರ್ಷದ ಹಿಂದೆ ನೀವು ಕಾಂಗ್ರೆಸ್‌ ಪಕ್ಷ ವಿಭಜಿಸಿದ್ದು ಯಾಕೆ?

ಯಾವುದೇ ಕಹಿ ಇಲ್ಲದೆ ನಾನು ಕಾಂಗ್ರೆಸ್‌ ಪಕ್ಷ ಬಿಟ್ಟೆ. ರಾಜ್ಯದ ರಾಜಕಾರಣದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳೇ ಮುಂಚೂಣಿಯಲ್ಲಿದ್ದವು. ಅದರಿಂದಾಗಿ ಪ್ರಾದೇಶಿಕ ಆಕಾಂಕ್ಷೆಗಳು ಈಡೇರುತ್ತಿರಲಿಲ್ಲ. ವಜ್ರದಿಂದ ಹಿಡಿದು ಅಲ್ಯುಮಿನಿಯಂವರೆಗೆ ರಾಜ್ಯವು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧ. ವಿದ್ಯುತ್‌ ಕೂಡ ಅಗತ್ಯಕ್ಕಿಂತ ಹೆಚ್ಚೇ ಉತ್ಪಾದನೆ ಆಗುತ್ತಿದೆ. ರೈತರು ಭತ್ತದ ಎರಡು ಬೆಳೆ ಬೆಳೆಯುತ್ತಿದ್ದಾರೆ ಎಂದರೆ ಮಣ್ಣು ಫಲವತ್ತಾಗಿದೆ ಎಂದು ಅರ್ಥ. ಆದರೆ, ಜನರು ಮಾತ್ರ ಬಡವರಾಗಿಯೇ ಇದ್ದಾರೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜನರಿಗೆ ನ್ಯಾಯ ಒದಗಿಸಲು ಪ್ರಾದೇಶಿಕ ಪಕ್ಷವೇ ಬೇಕು.

* ಪ್ರಧಾನಿ ಮೋದಿ ಅವರ ಬಗ್ಗೆ ನಿಮ್ಮ ಅನಿಸಿಕೆ ಏನು?
ಅವರ ಆರಂಭ ಚೆನ್ನಾಗಿಯೇ ಇತ್ತು. ಆದರೆ, ಈಗ ಅವರು ದೊಡ್ಡ ವೈಫಲ್ಯ. ಸಂತೃಪ್ತಿಯ ಬಗ್ಗೆ ಮಾತನಾಡುವ ಯಾವ ವರ್ಗವೂ ಸಮಾಜದಲ್ಲಿ ಈಗ ಇಲ್ಲ. ಕೊಟ್ಟ ಯಾವ ಭರವಸೆಯನ್ನೂ ಮೋದಿಯವರು ಈಡೇರಿಸಿಲ್ಲ.

* ರಮಣ್‌ ಸಿಂಗ್‌ ಅವರ ಬಗ್ಗೆ...
ಅವರು ಅತ್ಯಂತ ಅದೃಷ್ಟವಂತ ವ್ಯಕ್ತಿ. ಅದಕ್ಷತೆ, ಭ್ರಷ್ಟಾಚಾರ, ದುರ್ಬಲ ಆಡಳಿತ ಎಲ್ಲದರ ನಡುವೆಯೂ ಅವರು ಉಳಿದಿದ್ದಾರೆ. ಮೂರು ಅವಧಿಗೆ ಜನರು ಅವರನ್ನು ನೋಡಿದ್ದಾರೆ. ಹಾಗಾಗಿ ಈ ಬಾರಿ ಅವರ ಅದೃಷ್ಟ ಕೊನೆಯಾಗಲಿದೆ.

* ನಕ್ಸಲ್‌ ಸಮಸ್ಯೆ ಮತ್ತು ಅದಕ್ಕೆ ಸರ್ಕಾರ ನೀಡುತ್ತಿರುವ ಪ್ರತಿಕ್ರಿಯೆ ಬಗ್ಗೆ ಅಭಿಪ್ರಾಯ ಏನು?
ಈಗಿನ ಸರ್ಕಾರ ನಕ್ಸಲ್‌ ಸಮಸ್ಯೆ ಯನ್ನು ನಿಭಾಯಿಸುತ್ತಿರುವ ರೀತಿ ಗಂಭೀರವಾಗಿಲ್ಲ. ಅರೆ ಸೇನಾ ಪಡೆಯನ್ನು ಹೆಚ್ಚು ಹೆಚ್ಚು ಕಳುಹಿಸ ಲಾಗುತ್ತಿದೆ. ಅದರಿಂದಾಗಿ ರಕ್ತ ಪಾತ ಹೆಚ್ಚುತ್ತಿದೆ. ಜನರಲ್ಲಿನ ಸಾಮಾಜಿಕ–ಆರ್ಥಿಕ ಅಂತರ ವನ್ನು ತುಂಬುವುದು ಈಗಿನ ಅಗತ್ಯ. ರಾಜಕೀಯ ಉಪ ಕ್ರಮ ಬೇಕಿದೆ, ಮಾತುಕತೆ ಆರಂಭಿಸುವ ಬಗ್ಗೆಯೂ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT