ಛೋಟುರಾಮ್ ಪ್ರತಿಮೆ ಅನಾವರಣ

7

ಛೋಟುರಾಮ್ ಪ್ರತಿಮೆ ಅನಾವರಣ

Published:
Updated:
Deccan Herald

ಸಂಪ್ಲಾ, ಹರಿಯಾಣ: ಬ್ರಿಟಿಷ್ ಅವಧಿಯ ರೈತ ನಾಯಕ ಛೋಟುರಾಮ್ ಅವರ 64 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅನಾವರಣ ಮಾಡಿದರು.

ರೋಹ್ಟರ್ ಜಿಲ್ಲೆಯ ಸಂಪ್ಲಾದಲ್ಲಿ ಅವರ ನೆನಪಿನಲ್ಲಿ ನಿರ್ಮಿಸಿರುವ ಮ್ಯೂಸಿಯಂಗೆ ಭೇಟಿ ನೀಡಿದರು. ಛೋಟುರಾಮ್ ಅವರ ಕುರಿತ ನಾಲ್ಕು ನಿಮಿಷಗಳ ಡಾಕ್ಯುಮೆಂಟರಿಯನ್ನು ಪ್ರಧಾನಿ ವೀಕ್ಷಿಸಿದರು. 

1881ರ ನವೆಂಬರ್ 24ರಂದು ಜನಿಸಿದ ಇವರು, ರೈತ ನಾಯಕ ಎಂದು ಗುರುತಿಸಿಕೊಂಡಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ರೈತರ ಸಬಲೀಕರಣ ಹಾಗೂ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದರು. ಬ್ರಿಟಿಷ್ ಅವಧಿಯಲ್ಲಿ ರೈತಪರ ಕಾನೂನು ಜಾರಿಗೊಳ್ಳಲು ಕಾರಣಕರ್ತರಾಗಿದ್ದರು. ಇವರು ಕೇಂದ್ರ ಸಚಿವ ಬೀರೇಂದ್ರ ಸಿಂಗ್ ಅವರ ತಾತ. 

ಪ್ರತಿಮೆ ನಿರ್ಮಾಣಕ್ಕೆಂದು 5,500 ರೈತರು ಕಬ್ಬಿಣದ ಲೋಹವನ್ನು ದಾನವಾಗಿ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !