ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ : ಚೀನಾ ಸರ್ಕಾರವನ್ನು ಟೀಕಿಸಿದ ವಿದೇಶಿ ಪತ್ರಕರ್ತರ ಗಡಿಪಾರು

Last Updated 20 ಫೆಬ್ರುವರಿ 2020, 8:53 IST
ಅಕ್ಷರ ಗಾತ್ರ

ಬೀಜಿಂಗ್:ಜನಾಂಗೀಯನಿಂದನೆ ಆರೋಪದಡಿ ಅಮೆರಿಕಾದವಾಲ್ಸ್ಟೀಟ್‌ ಜರ್ನಲ್‌ನ ನಾಲ್ವರು ಪತ್ರಕರ್ತರನ್ನು ಚೀನಾಸರ್ಕಾರ ಗಡಿಪಾರು ಮಾಡಿದೆ ಎಂದುಅಲ್ ಜಝೀರ ವರದಿ ಮಾಡಿದೆ.

ಕೊರೊನಾವೈರಸ್ಸೊಂಕಿನ ಹರಡುವಿಕೆಯನ್ನು ತಡೆಯುವಲ್ಲಿಚೀನಾಸರ್ಕಾರವೈಫಲ್ಯವನ್ನು ಈ ಪತ್ರಿಕೆಗಳುಟೀಕಿಸಿದ್ದವು, ಏಷ್ಯಾದ ನಿಜವಾದ ರೋಗ ಮನುಷ್ಯ ಚೀನಾ (China Is the Real Sick Man of Asia) ಎಂಬ ಶೀರ್ಷಿಕೆಯಲ್ಲಿ ವಾಲ್‌ ಸ್ಟ್ರೀಟ್‌ ಜರ್ನಲ್‌ನಲ್ಲಿ ಅಂಕಣಪ್ರಕಟವಾಗಿತ್ತು.

ಚೀನಾದ ಜನತೆಯ ವಿರುದ್ಧ ಜನಾಂಗೀಯ ಹೇಳಿಕೆಗಳನ್ನು ಬಳಸುವಮಾಧ್ಯಮಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ಚೀನಾದ ವಿದೇಶಾಂಗ ವಕ್ತಾರಜಿಂಗ್ಶೂಂಗ್‌ ಹೇಳಿದ್ದಾರೆ.

ಕೊರೊನಾವೈರಸ್‌ ಸೋಂಕಿನಿಂದಾಗಿ 2000ಕ್ಕೂ ಅಧಿಕ ಜನರು ಪ್ರಾಣವನ್ನು ಕಳೆದುಕೊಂಡಿದ್ದು, 75000ಕ್ಕೂ ಅಧಿಕ ಜನರಿಗೆ ಸೋಂಕು ತಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT