ಬುಧವಾರ, ಜನವರಿ 22, 2020
19 °C

ಪೌರತ್ವ ತಿದ್ದುಪಡಿ ಮಸೂದೆ ಕಪಟದಿಂದ ಕೂಡಿದೆ: ಕಾಂಗ್ರೆಸ್ ನಾಯಕ ಪಿ.ಚಿದಂಬರಂ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Chidambaram

ನವದೆಹಲಿ: ಹಿಂದುತ್ವ ಅಜೆಂಡಾವನ್ನು ಹೇರುವುದಕ್ಕಾಗಿ ಕೇಂದ್ರ ಸರ್ಕಾರ ಈ ಮಸೂದೆಯನ್ನು ಮಾಡಿದೆ. ಪೌರತ್ವ ತಿದ್ದುಪಡಿ ಮಸೂದೆ ಕಪಟದಿಂದ ಕೂಡಿದ್ದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಸಂವಿಧಾನದ ಪ್ರಕಾರ ಭಾರತೀಯ ಪೌರತ್ವವು ಹುಟ್ಟು ಮತ್ತು ವಂಶವನ್ನು ಆಧರಿಸಿದೆ. ಆದರೆ ಆಡಳಿತ ವರ್ಗ ಸ್ವೇಚ್ಛೆಯ ಉದ್ದೇಶದಿಂದ ಈ ಮಸೂದೆಯನ್ನು ಜಾರಿ ಮಾಡುತ್ತಿದೆ ಎಂದಿದ್ದಾರೆ ಚಿದಂಬರಂ.

ಅಸಮಾನತೆ,  ಅಕ್ರಮ ವಿಂಗಡಣೆ ಮತ್ತು ಸೇಚ್ಛೆಯಿಂದ ಕೂಡಿದ ಈ ಮಸೂದೆಯು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸಿದೆ. ಹಾಗಾಗಿ ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದ ಚಿದಂಬರಂ ಇದು ಅಸಂವಿಧಾನಿಕ, ಇದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Explainer | ಏನಿದು ಪೌರತ್ವ ತಿದ್ದುಪಡಿ ಮಸೂದೆ?

ಈ ಮಸೂದೆಗೆ ಕಾನೂನು ಸಲಹೆಯನ್ನು ನೀಡಿದವರು ಯಾರು?  ಕಾನೂನು ಸಚಿವಾಲಯ? ಗೃಹ ಸಚಿವಾಲಯ? ಅಥವಾ ಅಟಾರ್ನಿ ಜನರಲ್? ಎಂದು  ಕೇಂದ್ರವನ್ನು ಪ್ರಶ್ನಿಸಿದ ಚಿದಂಬರಂ  ಶ್ರೀಲಂಕಾದ ಹಿಂದೂಗಳನ್ನು ಮತ್ತು ಭೂತಾನದ ಕ್ರೈಸ್ತರನ್ನು ಹೊರಗಿಡುವುದಕ್ಕೆ ಏನು ಕಾರಣ? ಸೇರಿಸುವುದು- ಹೊರಗಿಡುವುದು ಎಲ್ಲವೂ ವಿವೇಚನೆಗೆ ನಿಲುಕದ್ದು ಎಂದಿದ್ದಾರೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು