ಭಾನುವಾರ, ಡಿಸೆಂಬರ್ 15, 2019
21 °C

ಕಲ್ಲಿದ್ದಲು ಹಗರಣ: ಡಿಸೆಂಬರ್‌ 5ಕ್ಕೆ ಶಿಕ್ಷೆ ಪ್ರಕಟ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಕ್ರಮ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಪ್ರಕರಣಕ್ಕೆ ಸಂಬಂಧಿಸಿ, ಮಾಜಿ ಕೇಂದ್ರ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಸೇರಿದಂತೆ ಐವರ ಶಿಕ್ಷೆಯ ಪ್ರಮಾಣವನ್ನು ದೆಹಲಿ ಕೋರ್ಟ್‌ ಡಿ.5ರಂದು ಪ್ರಕಟಿಸಲಿದೆ. 

ವಿಶೇಷ ನ್ಯಾಯಾಧೀಶ ಭಾರತ್ ಪರಾಶರ್ ಈ ಪ್ರಕರಣದ ವಿಚಾರಣೆ ನಡೆಸಿದರು. ಆರೋಪಿಗಳಿಗೆ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಖಾಸಗಿ ಸಂಸ್ಥೆಗೆ ಭಾರಿ ದಂಡ ವಿಧಿಸುವಂತೆ ಸಿಬಿಐ ಕೋರಿದೆ.

ಗುಪ್ತಾ ಅವರಿಗೆ 70 ವರ್ಷವಾಗಿದ್ದು, ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವರ ಪಿಂಚಣಿಯೇ ಕುಟುಂಬಕ್ಕೆ ಆಧಾರ ಎಂದು ಗುಪ್ತಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ.30ರಂದು ನ್ಯಾಯಾಲಯ ಗುಪ್ತಾ ಅವರು ಸೇರಿದಂತೆ ಐವರನ್ನು ಮತ್ತು ವಿಕಾಸ್‌ ಮೆಟಲ್‌ ಪವರ್‌ ಲಿಮಿಟೆಡ್‌ ಕಂಪೆನಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. 

2012ರಲ್ಲಿ ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣದ ಮೊಯಿರಾ ಮತ್ತು ಮಧುಜೋರ್‌ ಎಂಬಲ್ಲಿನ ಕಲ್ಲಿದ್ದಲ್ಲು ನಿಕ್ಷೇಪ ಹಂಚಿಕೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು