ಚಳಿಗೆ ನಡುಗಿದ ಕಾಶ್ಮೀರ, ಲಡಾಖ್

ಜಮ್ಮು: ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಶೀತ ಹೆಚ್ಚಾಗಿದ್ದು, ಲೇಹ್‌ನ ಉಷ್ಣಾಂಶ –13.2 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಶೂನ್ಯ ಡಿಗ್ರಿಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದ್ದರೆ, ಜಮ್ಮುವಿನಲ್ಲಿ 8 ಡಿಗ್ರಿ ಸೆಲ್ಸಿಯಸ್ ಇತ್ತು. ಈ ಭಾಗದಲ್ಲಿ ಹಗಲಿನ ವೇಳೆ ಬಿಸಿಲು ಪ್ರಖರವಾಗಿದ್ದರಿಂದ ಹವಾಮಾನ ಸಮತೋಲನದಿಂದ ಕೂಡಿದೆ. ಆದರೆ, ಲಡಾಖ್ ಭಾಗದಲ್ಲಿ ಕೊರೆವ ಚಳಿ ಮುಂದುವರಿದಿದೆ ಎಂದು ಮಾಹಿತಿ ನೀಡಿದೆ.
ಉತ್ತರ ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಹಿಮ ಬೀಳುತ್ತಿದೆ. ಗುಲ್ಮಾರ್ಗ್, ಕುಪ್ವಾರ ನಗರಗಳಲ್ಲಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಹಿಮಪಾತದಿಂದ ಮುಚ್ಚಲಾಗಿದ್ದ ಲೇಹ್ – ಶ್ರೀನಗರ ರಸ್ತೆ ಸಂಚಾರವನ್ನು ಪುನರಾರಂಭಿಸಲು ಸಂಚಾರ ಇಲಾಖೆಯು ಶ್ರಮಿಸುತ್ತಿದೆ.
ಪ್ರತಿಕ್ರಿಯಿಸಿ (+)