ಮೋದಿ ಬೆಂಬಲಿಗರೆಲ್ಲರೂ ಮೂರ್ಖರೇ: ರಮ್ಯಾ ಟ್ವೀಟ್

ಶನಿವಾರ, ಮಾರ್ಚ್ 23, 2019
31 °C

ಮೋದಿ ಬೆಂಬಲಿಗರೆಲ್ಲರೂ ಮೂರ್ಖರೇ: ರಮ್ಯಾ ಟ್ವೀಟ್

Published:
Updated:

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರೆಲ್ಲರೂ ಮೂರ್ಖರೇ’ ಎಂಬ ಮೀಮ್‌ ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ದಿವ್ಯಾ ಸ್ಪಂದನಾ (ರಮ್ಯಾ) ಮೋದಿ ಬೆಂಬಲಿಗರನ್ನು ಕುಟುಕಿದ್ದಾರೆ. 

ನಿಮಗೆ ಗೊತ್ತೆ? ಮೋದಿಯ ಮೂವರು ಬೆಂಬಲಿಗರಲ್ಲಿ ಒಬ್ಬರು, ಉಳಿದಿಬ್ಬರಂತೆಯೇ ಮೂರ್ಖನಾಗಿರುತ್ತಾನೆ’ ಎನ್ನುವ ಬರಹವನ್ನೊಳಗೊಂಡ ಮೋದಿ ಚಿತ್ರವನ್ನು ರಮ್ಯಾ ಟ್ವಿಟ್‌ ಮಾಡಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ವಾಕ್‌ ಸಮರಕ್ಕೆ ಇದು ಮತ್ತಷ್ಟು ಕಿಚ್ಚು ಹಚ್ಚಿಸಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ, 2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಮತಗಳಿಕೆಯಲ್ಲಿ ಶೇ 32ರಷ್ಟು ಮತ ಪಡೆದಿತ್ತು. ರಮ್ಯಾ ಹಂಚಿಕೊಂಡಿರುವ ಮೀಮ್‌ ಪ್ರಕಾರ ಅವರೆಲ್ಲರೂ ಮೂರ್ಖರು ಎಂದಾಗುತ್ತದೆ. 

ಮೋದಿ ಬೆಂಬಲಿಗರಿಂದ ಈ ಟ್ವೀಟ್‌ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ರಮ್ಯಾ ಅವರನ್ನು ವ್ಯಂಗ್ಯ ಮಾಡಿರುವ ಪ್ರತಿಕ್ರಿಯೆಗಳೂ ಬಂದಿವೆ. ‘ನಿಮಗೆ ಗೊತ್ತೆ? ಈ ಇಬ್ಬರಲ್ಲಿ ಒಬ್ಬರು ನಟನೆಯಲ್ಲಿ ವಿಫಲರಾಗಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿದ್ದಾರಾ?’ ಎಂದು ದಿ ಮೀಮ್‌ ಮೆಜಿಷಿಯನ್‌ ಕುಟುಕಿದೆ.

 

‘ನಿಮಗೆ ಗೊತ್ತೆ? ಮೂವರು ರಾಹುಲ್‌ ಬೆಂಬಲಿಗರಲ್ಲಿ, ಮೂವರೂ ಮೂರ್ಖರೇ ರಾಹುಲ್‌ ಅವರಂತೆ’ ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ.

ಪಕ್ಷವೊಂದರ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ಅವರಷ್ಟೇ ಈ ರೀತಿಯ ವ್ಯಂಗ್ಯದ ಟ್ವೀಟ್‌ಗಳನ್ನು ಪ್ರಕಟಿಸಿಲ್ಲ. ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಲ್ವಿಯ ಸಹ ಇದೇ ರೀತಿಯ ಮೀಮ್‌ಗಳನ್ನು ಟ್ವೀಟ್‌ ಮಾಡಿದ್ದರು.

2017ರ ಡಿಸೆಂಬರ್‌ನಲ್ಲಿ ಗುಜರಾತ್‌ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್‌ ನೆಹರು ಅವರ ಕುರಿತ ವ್ಯಂಗ್ಯದ ಟ್ವೀಟ್‌ ಪ್ರಕಟಿಸಿದ್ದರು. ನೆಹರೂ ಅವರು ತಮ್ಮ ಸೋದರಿಯನ್ನು ತಬ್ಬಿಕೊಂಡ ಚಿತ್ರವನ್ನು ಪ್ರಕಟಿಸಿ, ನೆಹರೂ ಅವರು ಹೆಣ್ಣಿನ ಬಗ್ಗೆ ಆಸಕ್ತಿ ಹೊಂದಿದ್ದಾರೆ’ ಎಂಬ ಟ್ವೀಟ್‌ ಅದಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 33

  Happy
 • 3

  Amused
 • 2

  Sad
 • 2

  Frustrated
 • 21

  Angry

Comments:

0 comments

Write the first review for this !