ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 19 ಭೀತಿ: ಬಿಜೆಪಿ ಸಂಸದ ಸುರೇಶ್‌ ಪ್ರಭು ಮೇಲೆ 14 ದಿನಗಳ ಕಾಲ ನಿಗಾ

Last Updated 18 ಮಾರ್ಚ್ 2020, 6:59 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಭೀತಿ ಹಿನ್ನೆಲೆ ಸೌದಿ ಅರೇಬಿಯಾದಿಂದ ಭಾರತಕ್ಕೆ ಹಿಂತಿರುಗಿರುವಬಿಜೆಪಿ ಸಂಸದ ಸುರೇಶ್‌ ಪ್ರಭು ಅವರು 14 ದಿನಗಳ ಕಾಲ ಮನೆಯಲ್ಲೇಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದಾರೆ.

ಸುರೇಶ್‌ ಪ್ರಭು ಅವರು ಮಾರ್ಚ್‌ 10ರಂದುಜಿ20 ಶೆರ್ಪಾ ಸಭೆ ನಿಮಿತ್ತ ಸೌದಿ ಅರೇಬಿಯಾಗೆ ಭೇಟಿ ನೀಡಿದ್ದರು. ಬಳಿಕ ಭಾರತಕ್ಕೆ ಹಿಂತಿರುಗಿದ ಅವರನ್ನು ಕೊರೊನಾ ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ನೆಗೆಟಿವ್‌ ಇರುವುದು ದೃಢಪಟ್ಟಿತ್ತು. ಆದರೂ, ಮನೆಯಲ್ಲೇ ಪ್ರತ್ಯೇಕವಾಗಿರಲು ಇಚ್ಛಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿ20 ಶೃಂಗಸಭೆಯಲ್ಲಿ ಭಾಗವಹಿಸಲುಸುರೇಶ್‌ ಪ್ರಭು ನೇಮಕಗೊಂಡಿದ್ದರು.

ಈ ಹಿಂದೆ ಕೇಂದ್ರ ಸಚಿವ ವಿ.ಮುರಳಿಧರನ್‌ ಅವರು ಕೊರೊನಾ ವೈರಸ್‌ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲು ಕೇರಳ ಮೂಲದ ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿದ್ದರು. ಬಳಿಕ ಅವರನ್ನು ಕೊರೊನಾ ಸೋಂಕುತಪಾಸಣೆಗೆ ಒಳಪಡಿಸಲಾಗಿತ್ತು.ವರದಿಯಲ್ಲಿ ನೆಗೆಟಿವ್‌ ಇರುವುದುದೃಢಪಟ್ಟಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಮನೆಯಲ್ಲಿಯೇ ನಿಗಾವಹಿಸಲು ನಿರ್ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT