ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿ: ದುಬೈ- ಬೆಂಗಳೂರು ಇಂಡಿಗೊ ವಿಮಾನ ಸಿಬ್ಬಂದಿಗಳ ಮೇಲೆ ನಿಗಾ

Last Updated 3 ಮಾರ್ಚ್ 2020, 14:02 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸೋಂಕು ಇರುವ ಹೈದರಾಬಾದ್ ನಿವಾಸಿ ಪ್ರಯಾಣಿಸಿದ್ದ ದುಬೈ- ಬೆಂಗಳೂರು ಇಂಡಿಗೊ ವಿಮಾನದ ನಾಲ್ವರು ಸಿಬ್ಬಂದಿಗಳ ಮೇಲೆ ನಿಗಾ ಇರಿಸಲಾಗಿದೆ.

ಫೆಬ್ರುವರಿ 20ರಂದು ಕೊರೊನಾ ವೈರಸ್ ಸೋಂಕು ಇರುವ ವ್ಯಕ್ತಿ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್‌ ಮೂಲದ ಸಾಫ್ಟ್‌ವೇರ್ ಇಂಜಿನಿಯರ್, 24ರ ಹರೆಯದ ವ್ಯಕ್ತಿಗೆ ಸೋಂಕು ತಗಲಿರುವುದು ಸೋಮವಾರ ಪತ್ತೆಯಾಗಿತ್ತು. ತೆಲಂಗಾಣದಲ್ಲಿ ಪತ್ತೆಯಾದ ಮೊದಲ ಕೊರೊನಾ ವೈರಸ್ ಸೋಂಕು ಪ್ರಕರಣ ಇದಾಗಿತ್ತು.

ಕಳೆದ ತಿಂಗಳು ಈ ವ್ಯಕ್ತಿ ದುಬೈನಲ್ಲಿ ಹಾಂಗ್ ಕಾಂಗ್‌ನ ಜನರೊಂದಿಗೆ ಕೆಲಸ ಮಾಡಿದ್ದು, ಅಲ್ಲಿಂದಲೇ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ. ಫೆಬ್ರುವರಿ 20ರಂದು ದುಬೈನಿಂದ ಬೆಂಗಳೂರಿಗೆ ಬಂದ ಇವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್ ಪ್ರಯಾಣ ಕೈಗೊಂಡಿದ್ದರು.

ಸೋಂಕು ತಗಲಿರುವ ವ್ಯಕ್ತಿ ಇಂಡಿಗೊ ವಿಮಾನ 6ಇ 96 (ದುಬೈ- ಬೆಂಗಳೂರು) ನಲ್ಲಿ 2020, ಫೆಬ್ರುವರಿ 20ರಂದು ಪ್ರಯಾಣಿಸಿದ್ದರು. ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ (ಎಪಿಎಚ್‌ಒ)ಬೆಂಗಳೂರಿನ ನಿರ್ದೇಶನದಂತೆ ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಗಳನ್ನು ಮನೆಯಲ್ಲಿಯೇ ನಿಗಾವಹಿಸಲಾಗುವುಗುದು. 2020ಮಾರ್ಚ್ 2ರಿಂದಲೇ ಸಿಬ್ಬಂದಿಗಳ ಮೇಲೆ ನಿಗಾ ಇಡಲಾಗಿದೆ ಎಂದು ಇಂಡಿಗೊ ವಿಮಾನ ಸಂಸ್ಥೆ ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT