ಸೋಮವಾರ, ಜೂನ್ 1, 2020
27 °C

ಜಮ್ಮು ಕಾಶ್ಮೀರ: ಕೋವಿಡ್‌–19 ಸೋಂಕಿಗೆ ಮತ್ತೊಂದು ಬಲಿ, ಸೋಂಕಿತರ ಸಂಖ್ಯೆ 38ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ ಭಾನುವಾರ ಕೋವಿಡ್‌–19 ಸೋಂಕಿನಿಂದ  55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮಾರಣಾಂತಿಕ ಈ ಸೋಂಕಿಗೆ ಮೃತಪಟ್ಟ ಎರಡನೇ ಪ್ರಕರಣ ಇದಾಗಿದ್ದು, ಈವರೆಗೆ ಸೋಂಕು ದೃಢಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಬಾರಾಮುಲ್ಲ ಜಿಲ್ಲೆಯ ತಂಗಮಾರ್ಗದ ನಿವಾಸಿಯಾದ ಈ ವ್ಯಕ್ತಿಗೆ ಶನಿವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಶ್ರೀನಗರದ ಎದೆರೋಗಗಳ ಆಸ್ಪತ್ರೆಯ  ಪ್ರತ್ಯೇಕ ಘಟಕದಲ್ಲಿ ಇರಿಸಲಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರು ಭಾನುವಾರ ಮುಂಜಾನೆ ಸಾವನ್ನಪಿದ್ದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

'ಇಂದು ದುಃಖದೊಂದಿಗೆ ಆರಂಭವಾದ ದಿನ. ಶ್ರೀನಗರದಲ್ಲಿ ಭಾನುವಾರ ಬೆಳಿಗ್ಗೆ ಉಂಟಾದ ಕೋವಿಡ್‌ ಸೋಂಕಿತನ ಸಾವು ದುರದುಷ್ಟಕರ’ ಎಂದು ಜಮ್ಮು ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್‌ ಕನ್ಸಲ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು