ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ 2: ಏಪ್ರಿಲ್‌ 20ರ ನಂತರ ಏನೆಲ್ಲ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ?

Last Updated 15 ಏಪ್ರಿಲ್ 2020, 7:29 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ಎರಡನೇ ಹಂತದ ಲಾಕ್‌ಡೌನ್‌ನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಬುಧವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮೇ 3ರ ವರೆಗೂ ರೈಲು, ಮೆಟ್ರೊ, ಬಸ್‌ ಸೇರಿದಂತೆ ಎಲ್ಲ ಸಾರ್ವಜನಿಕ ಸಾರಿಗೆ ಸೇವೆಗಳ ಸಂಚಾರ ನಿರ್ಬಂಧ ಮುಂದುವರಿಸಿದೆ. ಸಾರ್ವಜನಿಕ ಸ್ಥಳಗಳನ್ನು ತೆರೆಯುವುದನ್ನೂ ನಿಷೇಧಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು, ಮಾಲ್‌ಗಳು, ಕ್ರೀಡಾಂಗಣಗಳು, ಚಿತ್ರಮಂದಿರಗಳು ಮುಚ್ಚಿರಲಿವೆ. ಆದರೆ, ಕೋವಿಡ್‌–19 ಹಾಟ್‌ಸ್ಪಾಟ್‌ ಅಲ್ಲದ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳು ಏಪ್ರಿಲ್‌ 20ರ ಬಳಿಕ ಪುನರಾರಂಭಗೊಳ್ಳಲಿವೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿ ಪಟ್ಟಿ ಬಿಡುಗಡೆ ಮಾಡಿದೆ. ಆರ್ಥಿಕತೆಗೆ ಚೇತರಿಕೆ ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಅನುವಾಗಲು ಹಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಅವುಗಳ ಪಟ್ಟಿ ಇಲ್ಲಿದೆ:

* ಎಲ್ಲ ರೀತಿಯ ಸರುಕುಗಳ ಸಾಗಣೆಗೆ ಅವಕಾಶ (ಅತ್ಯಗತ್ಯ ವಸ್ತುಗಳು ಹೊರತಾಗಿಯೂ)

* ಆಸ್ಪತ್ರೆಗಳು, ನರ್ಸಿಂಗ್‌ ಹೋಂಗಳು, ಕ್ಲಿನಿಕ್‌ಗಳು, ಆಯುಷ್‌ ಕೇಂದ್ರಗಳು ಸೇರಿದಂತೆ ಎಲ್ಲ ಆರೋಗ್ಯ ಸೇವೆಗಳ ಕಾರ್ಯಾಚರಣೆ

* ಎಲ್ಲ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳ ಸಂಪೂರ್ಣ ಕಾರ್ಯಾಚರಣೆ. ಕೃಷಿ ಕಾರ್ಯಗಳು, ಉತ್ಪಾದನೆಗಳ ಮಾರಾಟ, ವಿತರಣೆ, ಗೊಬ್ಬರ, ಬೀಜಗಳ ಮಾರಾ; ಮೀನುಗಾರಿಕೆ; ಪಶುಸಂಗೋಪನೆ; ಟೀ, ಕಾಫಿ ಹಾಗೂ ರಬ್ಬರ್‌ ತೋಟಗಾರಿಕೆಗಳಿಗೆ ಅವಕಾಶ

* ಆರ್‌ಬಿಐ, ಎನ್‌ಪಿಸಿಐ, ಸಿಸಿಐಎಲ್‌ ಸೇರಿದಂತೆ ಹಣಕಾಸು ಸಂಸ್ಥೆಗಳು, ಪಾವತಿ ವ್ಯವಸ್ಥೆ ಆಪರೇಟರ್‌ಗಳು ಕಾರ್ಯಾಚರಿಸಬಹುದು

* ಫೇಸ್‌ ಮಾಸ್ಕ್‌ ಧರಿಸಿ ಹಾಗೂ ಅಂತರ ಕಾಯ್ದುಕೊಳ್ಳುವ ಮೂಲಕ ನರೇಗಾ ಅಡಿಯಲ್ಲಿ ಕೆಲಸಗಳಿಗೆ ಅವಕಾಶ

* ಗ್ರಾಮೀಣ ಭಾಗಗಳಲ್ಲಿರುವ ಕೈಗಾರಿಕೆಗಳ ಕಾರ್ಯಾಚರಣೆ; ಆಹಾರ ಸಂಸ್ಕರಣ ಕೇಂದ್ರಗಳು, ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳು, ಗ್ರಾಮೀಣ ಭಾಗಗಳಲ್ಲಿ ಕಟ್ಟಡ ಮತ್ತು ಕೈಗಾರಿಕೆ ಯೋಜನೆಗಳು, ನೀರಾವರಿ ಮತ್ತು ಜಲ ಸಂರಕ್ಷಣ ಯೋಜನೆಗಳಿಗೆ ಆದ್ಯತೆ. ಗ್ರಾಮೀಣ ಭಾಗಗಳಲ್ಲಿ ಇವುಗಳಿಂದಾಗಿ ಉದ್ಯೋಗ ಅವಕಾಶ ತೆರೆದುಕೊಳ್ಳುತ್ತವೆ.

* ಕಲ್ಲಿದ್ದಲು, ತೈಲ ಹಾಗೂ ಖನಿಜ ತಯಾರಿಕೆ ಚಟುವಟಿಕೆಗಳಿಗೆ ಅವಕಾಶ. ಐಟಿ ಹಾರ್ಡ್‌ವೇರ್‌ ಹಾಗೂ ಅಗತ್ಯ ವಸ್ತುಗಳ ತಯಾರಿಕೆ, ಪ್ಯಾಕೇಜಿಂಗ್‌ಗೆ ಅವಕಾಶ

* ಡಿಜಿಟಲ್‌ ಆರ್ಥಿಕತೆ ಸೇವಾ ವಲಯಗಳಲ್ಲಿ ಅತ್ಯಗತ್ಯವಾಗಿದೆ; ಇದು ದೇಶದ ಉನ್ನತಿಗೂ ಮುಖ್ಯವಾಗಿದೆ. ಇ–ಕಾಮರ್ಸ್‌ ಕಾರ್ಯಾಚರಣೆಗಳು, ಐಟಿ ಮತ್ತು ಐಟಿ ಆಧಾರಿತ ಸೇವೆಗಳು, ಆನ್‌ಲೈನ್‌ ತರಬೇತಿ, ದೂರಶಿಕ್ಷಣ ಕಾರ್ಯಗಳು ಮುಂದುವರಿಸಬಹುದು

* ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ಅಡಚಣೆ ಎದುರಾಗದಂತೆ ಪೂರೈಕೆಯಾಗಲು ಕ್ರಮ. ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳ ಅಗತ್ಯ ಕಚೇರಿಗಳು ತೆರೆಯುವುದು ಹಾಗೂ ಸೀಮಿತ ಸಿಬ್ಬಂದಿ ಕಾರ್ಯಾಚರಣೆ

* ಮುದ್ರಣ, ಎಲೆಕ್ಟ್ರಾನಿಕ್‌ ಮೀಡಿಯಾ, ಡಿಟಿಎಚ್‌ ಹಾಗೂ ಕೇಬಲ್‌ ಸೇವೆಗಳ ಮುಂದುವರಿಕೆ. ಐಟಿ ಮತ್ತು ಐಟಿ–ಆಧಾರಿತ ಸೇವೆಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ. ಇ–ಕಾಮರ್ಸ್‌ ಕಂಪನಿಗಳು ಹಾಗೂ ಅವುಗಳ ವಾಹನಗಳ ಸಂಚಾರಕ್ಕೆ ಅವಕಾಶ

* ಲಾಕ್‌ಡೌನ್‌ನಿಂದ ಸಿಲುಕಿರುವ ಪ್ರವಾಸಿಗರು ಹಾಗೂ ವ್ಯಕ್ತಿಗಳು ಉಳಿದುಕೊಂಡಿರುವ ಹೊಟೇಲ್‌ಗಳು, ಹೋಂಸ್ಟೇಗಳು ಹಾಗೂ ಲಾಡ್‌ಗಳ ಕಾರ್ಯಾಚರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT