ಭಾನುವಾರ, ಜೂಲೈ 12, 2020
29 °C

Covid-19 India Update: ತಮಿಳುನಾಡಿನಲ್ಲಿ 3949 ಪ್ರಕರಣ, 62 ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Coronavirus

ನವದೆಹಲಿ: ತಮಿಳುನಾಡಿನಲ್ಲಿ ಇಂದು (ಸೋಮವಾರ) ಒಂದೇ ದಿನ 3949 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 62 ಸಾವು ಸಂಭವಿಸಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ, ತಮಿಳುನಾಡಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 86224ಕ್ಕೆ ಏರಿಕೆಯಾಗಿದೆ. 47749 ಮಂದಿ ಗುಣಮುಖರಾಗಿದ್ದರೆ 1141 ಸಾವು ಸಂಭವಿಸಿದೆ. 37331 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ 5257 ಪ್ರಕರಣಗಳು ಇಂದು ದೃಢಪಟ್ಟಿದ್ದು, 181 ಸಾವು ಸಂಭವಿಸಿದೆ. ಹಿಮಾಚಲ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 919 ತಲುಪಿದೆ. 363 ಸಕ್ರಿಯ ಪ್ರಕರಣಗಳಿದ್ದು, 536 ಮಂದಿ ಚೇತರಿಸಿಕೊಂಡಿದ್ದಾರೆ. 7 ಮಂದಿ ಈವರೆಗೆ ಮೃತಪಟ್ಟಿದ್ದಾರೆ.

ಕೇರಳದಲ್ಲಿ 121 ಪ್ರಕರಣಗಳು ಇಂದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4311ಕ್ಕೆ ಏರಿಕೆಯಾಗಿದೆ. ಸದ್ಯ 2057 ಸಕ್ರಿಯ ಪ್ರಕರಣಗಳಿವೆ ಎಂದು ಮುಖ್ಯಮತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಬಿಹಾರದಲ್ಲಿ 282 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 9506ಕ್ಕೆ ಏರಿಕೆಯಾಗಿದೆ.

ಪಂಜಾಬ್‌ನಲ್ಲಿ 202 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 5418 ತಲುಪಿದೆ. ಸಾವಿನ ಸಂಖ್ಯೆ 138ಕ್ಕೆ ಏರಿಕೆಯಾಗಿದೆ.

ಉತ್ತಾರಖಂಡದಲ್ಲಿ 8 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2831ಕ್ಕೆ ಏರಿಕೆಯಾಗಿದೆ.

ಐಟಿಬಿಪಿಯಲ್ಲಿ ನಾಲ್ಕು ಪ್ರಕರಣ ದೃಢ: ಇಂಡೊ–ಟಿಬೆಟನ್‌ ಬಾರ್ಡರ್ ಪೊಲೀಸ್ (ಐಟಿಬಿಪಿ) ನಾಲ್ವರು ಸಿಬ್ಬಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ಈ ಪಡೆಯಲ್ಲಿ ಸದ್ಯ 81 ಸಕ್ರಿಯ ಪ್ರಕರಣಗಳಿವೆ. ಈವರೆಗೆ 236 ಸಿಬ್ಬಂದಿ ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು