ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: 400ಕ್ಕಿಂತಲೂ ಹೆಚ್ಚು ಮಂದಿಗೆ ಸೋಂಕು ದೃಢ; ಸಾವಿನ ಸಂಖ್ಯೆ 82ಕ್ಕೆ ಏರಿಕೆ

Last Updated 2 ಏಪ್ರಿಲ್ 2020, 17:43 IST
ಅಕ್ಷರ ಗಾತ್ರ

ಬೆಂಗಳೂರು: ದೇಶವ್ಯಾಪಿ ಲಾಕ್‌ಡೌನ್ ಆಗಿ 9ನೇ ದಿನವಾದ ಗುರುವಾರ 400ಕ್ಕಿಂತಲೂ ಹೆಚ್ಚು ಮಂದಿಗೆ ಕೋವಿಡ್-19 ರೋಗ ತಗುಲಿದೆ. ತಬ್ಲಿಗಿ ಜಮಾತ್‌ನ ಮರ್ಕಜ್ ಘಟನೆಯಿಂದಾಗಿ ರೋಗಿಗಳ ಸಂಖ್ಯೆ ದಿಢೀರನೆ ಏರಿದ್ದು ದೇಶದಲ್ಲೀಗ 2,404 ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅರುಣಾಚಲ ಪ್ರದೇಶದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು, ಮರ್ಕಜ್‌ನಲ್ಲಿ ಭಾಗವಹಿಸಿದ ವ್ಯಕ್ತಿಯಾಗಿದ್ದಾರೆ ಇವರು.ಹರ್ಯಾಣದಲ್ಲಿ ಇದೇ ಮೊದಲ ಬಾರಿ ಕೋವಿಡ್‌ನಿಂದಾಗಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.ತೆಲಂಗಾಣದಲ್ಲಿ 3, ದೆಹಲಿಯಲ್ಲಿ 2, ಮಹಾರಾಷ್ಟ್ರ ಗುಜರಾತ್ ಮತ್ತು ರಾಜಸ್ಥಾನದಲ್ಲಿ ತಲಾ ಒಂದು ಸಾವು ಸಂಭವಿಸಿದ್ದು ದೇಶದಲ್ಲಿ ಸಾವಿನ ಸಂಖ್ಯೆ 82ಕ್ಕೇರಿದೆ.ಭಾರತದಲ್ಲಿ ಇಲ್ಲಿಯವರೆಗೆ2,299 ಪ್ರಕರಣಗಳು ವರದಿಯಾಗಿವೆ.

ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿದ ವಿದೇಶಿಯರು ಕಪ್ಪು ಪಟ್ಟಿಗೆ
ತಬ್ಲಿಗಿ ಜಮಾತ್‌ ಘಟನೆಗೆ ಸಂಬಂಧಿಸಿದಂತೆ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ 900 ವಿದೇಶಿಯರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ಮಿಷನರಿ ಚಟುವಟಿಕೆಗಳನ್ನು ಮಾಡಿದ್ದಕ್ಕಾಗಿ ಇವರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ವೀಸಾ ರದ್ದು ಮಾಡಲಾಗಿದೆ.

ಕೇರಳದಲ್ಲಿ 21 ಮಂದಿಗೆ ಕೋವಿಡ್
ಕೇರಳದಲ್ಲಿ ಗುರುವಾರ 21 ಮಂದಿಗೆ ಕೋವಿಡ್ ರೋಗ ದೃಢಪಟ್ಟಿರುವುದಾಗಿಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.ರಾಜ್ಯದಲ್ಲಿಒಟ್ಟು 286 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 256 ಮಂದಿಗೆ ಕೋವಿಡ್ ರೋಗ ಇದೆ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ 81 ಹೊಸ ಪ್ರಕರಣ
ಮಹಾರಾಷ್ಟ್ರದಲ್ಲಿ 81 ಹೊಸ ಪ್ರಕರಣಗಳು ವರದಿಯಾಗಿದ್ದು ಪ್ರಕರಣಗಳ ಸಂಖ್ಯೆ 416ಕ್ಕೇರಿದೆ. ಇಲ್ಲಿಯವರೆಗೆ 21ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೇಳಿದೆ.

ದೆಹಲಿಯಲ್ಲಿ ನಡೆ ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ 1062 ಮಂದಿ ಭಾಗವಹಿಸಿದ್ದಾರೆ. ಇಲ್ಲಿಯವರೆಗೆ 1300 ಮಂದಿಯನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಅವರ ಸ್ಯಾಂಪಲ್ ಸಂಗ್ರಹಿಸಲಾಗಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಹರ್ಯಾಣದಲ್ಲಿ 33 ಪ್ರಕರಣ
ಹರ್ಯಾಣದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 33ಕ್ಕೇರಿದೆ.ಇದರಲ್ಲಿ 20 ಮಂದಿಗೆ ರೋಗ ದೃಢಪಟ್ಟಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಹೇಳಿದೆ.

ಮರ್ಕಜ್ ನಿಜಾಮುದ್ದೀನ್‌ಗೆ ಭೇಟಿ ನೀಡಿದವರು 391 ಮಂದಿ: ಬಿಎಸ್‌ವೈ
ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ಕರ್ನಾಟಕದ 391 ಮಂದಿ ಭಾಗಿಯಾಗಿದ್ದರು. ಅವರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ. 91 ಮಂದಿಯ ಪೈಕಿ 11 ಮಂದಿಗೆ ಬೀದರ್‌ನಲ್ಲಿ ತಪಾಸಣೆ ನಡೆಸಿದ್ದು ಅವರಿಗೆ ಕೋವಿಡ್ ರೋಗ ದೃಢಪಟ್ಟಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕಾರ್ಗಿಲ್ ವ್ಯಕ್ತಿಗೆ ಕೋವಿಡ್
ಕಾರ್ಗಿಲ್‌ನ ವ್ಯಕ್ತಿಯೊಬ್ಬರಿಗೆ ಕೋವಿಡ್ರೋಗ ತಗುಲಿದ್ದು, ಅವರ ಒಡನಾಡಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ರಿಗ್ಜಿನ್ ಸಂಫೇಲ್ ಹೇಳಿದ್ದಾರೆ.

ಏಮ್ಸ್ ವೈದ್ಯರಿಗೂ ತಗುಲಿದ ಸೋಂಕು
ದೆಹಲಿಯ ಏಮ್ಸ್ ಆಸ್ಪತ್ರೆಯ ಫಿಸಿಯಾಲಜಿ ಇಲಾಖೆಯ ರೆಸಿಡೆಂಟ್ ಡಾಕ್ಟರ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಧಾರಾವಿಯಲ್ಲಿ 2 ಪ್ರಕರಣ
ಮುಂಬೈಯ ಧಾರಾವಿಯಲ್ಲಿ ಕೋವಿಡ್ 19ರೋಗ ತಗುಲಿರುವ ಎರಡನೇ ಪ್ರಕರಣ ವರದಿಯಾಗಿದೆ. ಬಿಎಂಸಿ ನೈರ್ಮಲ್ಯ ಕಾರ್ಯಕರ್ತರಾಗಿರುವ 52ರ ಹರೆಯದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಮಧ್ಯ ಪ್ರದೇಶದಲ್ಲಿ ಸಾವಿನ ಸಂಖ್ಯೆ 7
ಇಂದೋರ್‌ನಲ್ಲಿ 65 ಹರೆಯದ ಮಹಿಳೆಯೊಬ್ಬರು ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 7ಕ್ಕೆ ತಲುಪಿದೆ.

ಆಂಧ್ರ ಪ್ರದೇಶದಲ್ಲಿ 21 ಹೊಸ ಪ್ರಕರಣಗಳು ವರದಿಯಾಗಿದ್ದು ಪ್ರಕರಣಗಳ ಸಂಖ್ಯೆ 132 ಆಗಿದೆ.

ರಾಮೇಶ್ವರದಲ್ಲಿ ಎರಡು ಪ್ರಕರಣ
ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ 17 ಮಂದಿಯಲ್ಲಿ ಇಬ್ಬರಿಗೆ ಕೋವಿಡ್ ದೃಢ ಪಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 15 ಮಂದಿ ಐಸೋಲೇಷನ್‌ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ವೀರರಾಘವರಾವ್ ಹೇಳಿದ್ದಾರೆ.

ವಿದೇಶದಲ್ಲಿ ಕೋವಿಡ್ -19

ಅಮೆರಿಕದಲ್ಲಿ 6 ವಾರದ ಮಗು ಕೋವಿಡ್ ರೋಗದಿಂದ ಸಾವಿಗೀಡಾಗಿದೆ.ಇರಾನ್‌ನ ಸಂಸತ್ ಸ್ಪೀಕರ್‌ಗೆ ಕೋವಿಡ್ ರೋಗ ಇರುವುದಾಗಿ ದೃಢಪಟ್ಟಿದೆ.ಇಟಲಿಯಲ್ಲಿ ಕೋವಿಡ್ ರೋಗ ಬಾಧಿಸಿದ 760 ಮಂದಿ ಸಾವಿಗೀಡಾಗಿದ್ದಾರೆ.

ಮೂಲಸೌಕರ್ಯ ಯೋಜನೆಗಾಗಿಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2 ಟ್ರಿಲಿಯನ್ ಡಾಲರ್ ಘೋಷಿಸಿದ್ದು, ಕೊರೊನಾದಿಂದಾಗಿ ಕುಸಿದಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಕಾರ್ಯತಂತ್ರ ರೂಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT