ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಸಂದಿಗ್ಧ ಸ್ಥಿತಿಯಲ್ಲಿದೆ, ಮೊದಲು ಹಿಂಸಾಚಾರ ಶಮನವಾಗಲಿ: ಸಿಜೆಐ ಬೊಬಡೆ

Last Updated 9 ಜನವರಿ 2020, 11:12 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿಕಾಯ್ದೆಯನ್ನು ಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಸಲ್ಲಿಸಿದ ಅರ್ಜಿ ಬಗ್ಗೆ ಪ್ರತಿಕ್ರಿಯಿಸಿದಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಶರದ್ ಅರವಿಂದ ಬೊಬಡೆ, ದೇಶ ಸಂದಿಗ್ಧ ಸ್ಥಿತಿಯಲ್ಲಿದೆ. ಈ ರೀತಿಯಮನವಿಗಳು ನೆರವಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಈ ಮನವಿ ಬಗ್ಗೆ ತುರ್ತು ವಿಚಾರಣೆ ನಡೆಸಬೇಕು ಎಂಬ ಒತ್ತಾಯವನ್ನು ತಿರಸ್ಕರಿಸಿದ ಬೊಬಡೆ, ಹಿಂಸಾಚಾರ ಶಮನ ಆದ ನಂತರವೇ ಈ ಅರ್ಜಿಗಳ ವಿಚಾರಣೆ ನಡೆಸಲಾಗುವುದು.ದೇಶ ಸಂದಿಗ್ಧ ಸ್ಥಿತಿಯಲ್ಲಿದೆ. ಈಗ ಶಾಂತಿ ನೆಲೆಸಲಿರುವ ಪ್ರಕ್ರಿಯೆ ಮಾಡಬೇಕು ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಾಂವಿಧಾನಿಕ ಎಂದು ಘೋಷಿಸಬೇಕು ಮತ್ತು ಈ ಕಾಯ್ದೆ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿರುವ ಹೋರಾಟಗಾರರು, ವಿದ್ಯಾರ್ಥಿಗಳು, ಮಾಧ್ಯಮದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ವಿನೀತ್ ಧಂದಾ ಎಂಬ ನ್ಯಾಯವಾದಿಯೊಬ್ಬರು ಮನವಿ ಸಲ್ಲಿಸಿದ್ದರು.

ಸಂಸತ್ತಿನಲ್ಲಿ ಅಂಗೀಕರಿಸಿದ ಕಾಯ್ದೆಯನ್ನು ಸಾಂವಿಧಾನಿಕ ಎಂದು ನಾವು ಹೇಗೆ ಘೋಷಿಸಲಿ? ಸಂವಿಧಾನದ ಕಾರ್ಯಗಳ ಬಗ್ಗೆ ಪೂರ್ವ ಕಲ್ಪನೆ ಇದ್ದೇ ಇರುತ್ತದೆ. ನೀವು ಕಾನೂನು ವಿದ್ಯಾರ್ಥಿಯಾಗಿರುವುದರಿಂದ ಮುಂದೊಂದು ದಿನ ನಿಮಗದು ಅರ್ಥವಾಗುತ್ತದೆ ಎಂದು ವಿನೀತ್ ಅವರ ಮನವಿಗೆಮುಖ್ಯ ನ್ಯಾಯಮೂರ್ತಿಗಳು ಈ ರೀತಿಪ್ರತಿಕ್ರಿಯಿಸಿದ್ದಾರೆ.

ಕಾನೂನಿನ ಸಿಂಧುತ್ವವನ್ನು ಪರಿಶೀಲಿಸುವುದು ಈ ನ್ಯಾಯಾಲಯದ ಕೆಲಸ, ಕಾನೂನನ್ನು ಸಾಂವಿಧಾನಿಕ ಎಂದು ಘೋಷಿಸುವುದಲ್ಲ ಎಂದು ಬಿಆರ್‌ ಗವಾಯಿ,ಸೂರ್ಯ ಕಾಂತ್ ಮತ್ತು ಬೊಬಡೆಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಈ ಕಾಯ್ದೆ ಸಂವಿಧಾನದ ವಿರುದ್ಧ ಅಲ್ಲ ಮತ್ತು ದೇಶದಲ್ಲಿರುವ ಯಾವುದೇ ಪ್ರಜೆಯ ವಿರುದ್ಧ ಅಲ್ಲ ಎಂದು ಜನರಿಗೆ ಮನವರಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿ ಎಂದು ವಿನೀತ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮನವಿಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT