ಸೋಮವಾರ, ಸೆಪ್ಟೆಂಬರ್ 16, 2019
24 °C
ವಿಮಾನ ಸೀಟು ನಿಗದಿಯಲ್ಲಿ ಅಕ್ರಮ

ದೀಪಕ್‌ ತಲ್ವಾರ್‌ಗೆ ಜಾಮೀನು ನಿರಾಕರಣೆ

Published:
Updated:

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತೀಯ ವಿಮಾನಯಾನ ವಲಯದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ದೀಪಕ್ ತಲ್ವಾರ್ ಅವರ ಜಾಮೀನು ಅರ್ಜಿ ವಜಾಗೊಳಿಸಿರುವ ವಿಶೇಷ ಕೋರ್ಟ್‌, ಆತನ ಪುತ್ರ ಆದಿತ್ಯ ತಲ್ವಾರ್‌ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಈ ಇಬ್ಬರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಸಲ್ಲಿಸಿದ್ದ ದೋಷಾರೋಪ ಪಟ್ಟಿ ಪರಿಶೀಲನೆ ಬಳಿಕ ವಿಶೇಷ ನ್ಯಾಯಾಲಯವು ಬುಧವಾರ ತೀರ್ಪು ನೀಡಿದೆ.

ದೀಪಕ್‌ ತಲ್ವಾರ್‌ ವಿರುದ್ಧ ತನಿಖೆ ನಡೆಸುವಂತೆ ಏಪ್ರಿಲ್‌ 29ರಂದು ಕೋರ್ಟ್‌ ಸೂಚನೆ ನೀಡಿತ್ತು ಎಂದು ಇ.ಡಿ ತಿಳಿಸಿತ್ತು.‌ ಆದರೆ, ವಿದೇಶದಲ್ಲಿರುವ ದೀಪಕ್‌ಗೆ ಹಲವು ಬಾರಿ ಸಮನ್ಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಲಿಲ್ಲ.

Post Comments (+)