ಶುಕ್ರವಾರ, ಏಪ್ರಿಲ್ 3, 2020
19 °C

ಕೊರೊನಾ: ಮಹಾರಾಷ್ಟ್ರದಲ್ಲಿ ಮತ್ತೊಂದು ಸಾವು; ಭಾರತದಲ್ಲಿ 6ಕ್ಕೇರಿದ ಸಾವಿನ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ:ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಶನಿವಾರ ರಾತ್ರಿ 11.30ಕ್ಕೆ ಸರ್ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಇವರು ಅಸುನೀಗಿದ್ದಾರೆ.

ಅದೇ ವೇಳೆ ಬಿಹಾರದಲ್ಲಿ 38ರ ಹರೆಯದ ವ್ಯಕ್ತಿಯೊಬ್ಬರು ಕಿಡ್ನಿ ವೈಫಲ್ಯದಿಂದ ಸಾವಿಗೀಡಾಗಿದ್ದಾರೆ. ಇವರಿಗೆ ಕೋವಿಡ್ -19 ಸೋಂಕು ಇರುವುದು ಪತ್ತೆಯಾಗಿತ್ತು. ಮುಂಗೇರ್ ನಿವಾಸಿಯಾದ  ಇವರು ಶನಿವಾರ ಪಟನಾದ ಏಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. 2 ದಿನಗಳ ಹಿಂದೆ ಇವರು ಕೋಲ್ಕತ್ತದಿಂದ ವಾಪಸ್ ಆಗಿದ್ದರು ಎಂದು ಏಮ್ಸ್ ವೈದ್ಯ ಡಾ. ಪ್ರಭಾತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇದೀಗ ಕೋವಿಡ್-19 ಸೋಂಕಿನಿಂದಾಗಿ ಮಹಾರಾಷ್ಟ್ರದಲ್ಲಿ ಸಾವಿಗೀಡಾದವರ ಸಂಖ್ಯೆ 2 ಆಗಿದ್ದು, ಭಾರತದಲ್ಲಿ ಸಾವಿಗೀಡಾದವರ ಸಂಖ್ಯೆ 6ಕ್ಕೆ ಏರಿದೆ.
 ಮುಂಬೈನಲ್ಲಿ 6 ಮಂದಿಗೆ ಮತ್ತು ಪುಣೆಯಲ್ಲಿ 4 ಜನರಿಗೆ ಕೊರೊನಾ  ಸೋಂಕು ದೃಢಪಟ್ಟಿದೆ.ಮಹಾರಾಷ್ಟ್ರದಲ್ಲಿ ರೋಗಿಗಳ ಸಂಖ್ಯೆ 74ಕ್ಕೆ ಏರಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ..

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು