Covid–19 India Update: ಒಟ್ಟು 46,711 ಪ್ರಕರಣ, 13,160 ಮಂದಿ ಗುಣಮುಖ

ನವದೆಹಲಿ: ಕೊರೊನಾ ವೈರಸ್ ನಿಗ್ರಹಿಸುವ ಉದ್ದೇಶದಿಂದ ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು, ಸೋಮವಾರದಿಂದ ಕೆಲವು ಷರತ್ತುಗಳೊಂದಿಗೆ ಸಡಿಲಿಕೆ ಅವಕಾಶವನ್ನೂ ನೀಡಲಾಗಿದೆ. ಈ ಮಧ್ಯೆ ಸೋಮವಾರ ಸಂಜೆ 5ರಿಂದ ಮಂಗಳವಾರ ಸಂಜೆ 5ರ ವರೆಗೂ, 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್–19 ದೃಢಪಟ್ಟ 3,875 ಹೊಸ ಪ್ರಕರಣಗಳು ದಾಖಲಾಗಿವೆ.
ಈ ಮೂಲಕದಲ್ಲಿ ದೇಶದಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 46,711ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ದೇಶದಾದ್ಯಂತ 13,160 ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 194 ಮಂದಿ ಸೋಂಕಿತರು ಮೃತಪಟ್ಟಿದ್ದು, ಕೋವಿಡ್–19ನಿಂದ ಸಾವಿಗೀಡಾದವರ ಸಂಖ್ಯೆ1,583 ತಲುಪಿದೆ.
ದೇಶದಲ್ಲಿ 31,967 ಸಕ್ರಿಯ ಪ್ರಕರಣಗಳಿದ್ದು, ದೇಶದ ವಿವಿಧ ಭಾಗಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟು 14,541 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಈಗಾಗಲೇ 583 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಾವು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಇನ್ನೂ ಗುಜರಾತ್ನಲ್ಲಿ 5,804 ಪ್ರಕರಣಗಳು ಹಾಗೂ 319 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಒಟ್ಟು 4,898 ಪ್ರಕರಣಗಳು, 64 ಮಂದಿ ಸಾವು; ತಮಿಳುನಾಡಿನಲ್ಲಿ 3,550 ಪ್ರಕರಣಗಳು, 31 ಮಂದಿ ಸಾವು; ರಾಜಸ್ಥಾನದಲ್ಲಿ 3,061ಪ್ರಕರಣಗಳು, 77 ಮಂದಿ ಸಾವಿಗೀಡಾಗಿದ್ದಾರೆ.
ಕರ್ನಾಟಕದಲ್ಲಿ 659 ಸೋಂಕು ಪ್ರಕರಣಗಳು ದಾಖಲಾಗಿದ್ದು, 28 ಮಂದಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ3,049 ಸೋಂಕು ಪ್ರಕರಣಗಳ ಪೈಕಿ 176 ಮಂದಿ ಬಲಿಯಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ 1,717 ಪ್ರಕರಣ, 36 ಮಂದಿ ಸಾವು ಹಾಗೂ ತೆಲಂಗಾಣದಲ್ಲಿ1,085 ಪ್ರಕರಣಗಳು, 29 ಜನ ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸೋಂಕು ಪ್ರಕರಣ 2,859 ತಲುಪಿದ್ದು, 53 ಮಂದಿ ಮೃತಪಟ್ಟಿದ್ದಾರೆ.
#CoronaVirusUpdates: #COVID19 India Tracker
(As on 5th May, 2020 ,05:00 PM)▶️Confirmed cases: 46711
▶️Active cases: 31967
▶️Cured/Discharged: 13161
▶️Deaths:1583#IndiaFightsCorona #StayHome #StaySafe @ICMRDELHIVia @MoHFW_INDIA pic.twitter.com/fIBMYiaFdd
— #IndiaFightsCorona (@COVIDNewsByMIB) May 5, 2020
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.