ನಕ್ಸಲ್‌ ಬೆಂಬಲಿಗರಿಗೆ ಪ್ರಹಾರ

7
ವರ್ಷದಿಂದ ಕಾರ್ಯಾಚರಣೆ: ಛತ್ತೀಸಗಡದಲ್ಲಿ 500ಕ್ಕೂ ಹೆಚ್ಚು ಸೆರೆ

ನಕ್ಸಲ್‌ ಬೆಂಬಲಿಗರಿಗೆ ಪ್ರಹಾರ

Published:
Updated:

 ನವದೆಹಲಿ: ಮಾವೊವಾದಿಗಳ ಬೆಂಬಲಿಗರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಇದೇ ಮೊದಲ ಬಾರಿಗೆ ಕಾರ್ಯಾಚರಣೆ ಮಾಡಲಾಗಿದೆ. ಛತ್ತೀಸಗಡ ರಾಜ್ಯವೊಂದರಲ್ಲಿಯೇ ಕಳೆದ ಒಂದು ವರ್ಷದಲ್ಲಿ 500ಕ್ಕೂ ಹೆಚ್ಚು ಬೆಂಬಲಿಗರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಮುಖ್ಯಸ್ಥ ಆರ್‌.ಆರ್‌. ಭಟ್ನಾಗರ್‌ ಹೇಳಿದ್ದಾರೆ.

ರಾಜ್ಯಗಳ ಪೊಲೀಸ್‌ ಇಲಾಖೆಗಳ ಜತೆ ಸೇರಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಎಡಪಂಥೀಯ ಉಗ್ರರ ಚಟುವಟಿಕೆಗಳಿಗೆ ಅವಕಾಶವೇ ದೊರೆಯದಂತೆ ಮಾಡುವುದು ಇದರ ಉದ್ದೇಶ. ನಕ್ಸಲರ ವಿರುದ್ಧದ ನೇರ ಕಾರ್ಯಾಚರಣೆಯ ಜತೆಗೆ ಬೆಂಬಲಿಗರನ್ನು ಬಂಧಿಸುವ ಕೆಲಸವೂ ನಡೆದಿದೆ ಎಂದು ಅವರು ತಿಳಿಸಿದ್ದಾರೆ. 

ನಕ್ಸಲರ ನಿಗ್ರಹಕ್ಕಾಗಿ ಸುಮಾರು ಒಂದು ಲಕ್ಷ ಸಿಬ್ಬಂದಿಯನ್ನು ಸಿಆರ್‌ಪಿಎಫ್‌ ನಿಯೋಜಿಸಿದೆ. ಅವರಿಗೆ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಇತರ ಸಲಕರಣೆಗಳನ್ನು ಒದಗಿಸಲಾಗಿದೆ.

‘ಈಗ ನಾವು ಗ್ರಾಮಗಳತ್ತ ಹೋಗುತ್ತಿದ್ದೇವೆ. ಮಾವೊವಾದಿಗಳಿಗೆ ಬೆಂಬಲ ನೀಡುವ ಸ್ಥಳೀಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಕ್ಸಲರಿಗೆ ದೊರೆಯುವ ಗುಪ್ತಚರ ಮಾಹಿತಿ ಮತ್ತು ಸ್ಥಳೀಯ ಬೆಂಬಲವನ್ನು ನಿಲ್ಲಿಸಲಾಗುವುದು’ ಎಂದು ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !