ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಹಿಂಸಾಚಾರ: ಸಿಪಿಐಎಂ ಶಾಸಕ, ಬಿಜೆಪಿ ನಾಯಕನ ಮನೆ ಮೇಲೆ ಬಾಂಬ್ ದಾಳಿ

ಶಬರಿಮಲೆ ಪ್ರತಿಭಟನೆ
Last Updated 5 ಜನವರಿ 2019, 5:24 IST
ಅಕ್ಷರ ಗಾತ್ರ

ಕಣ್ಣೂರು:ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ ನಂತರ ಕೇರಳದಲ್ಲಿ ಉದ್ಭವಿಸಿರುವ ಹಿಂಸಾಚಾರ ಇನ್ನೂ ತಣ್ಣಗಾಗಿಲ್ಲ. ಶುಕ್ರವಾರ ರಾತ್ರಿ ಕಣ್ಣೂರು ಜಿಲ್ಲೆಯ ತಲಶ್ಶೇರಿಯಲ್ಲಿ ಸಿಪಿಐ(ಎಂ) ಶಾಸಕ ಎ.ಎನ್‌.ಶಂಸೀರ್ ಮನೆ ಮೇಲೆ ಅಪರಿಚಿತ ದುಷ್ಕರ್ಮಿಗಳು ಬಾಂಬ್‌ ದಾಳಿ ಎಸಗಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅದೇ ಪಟ್ಟಣದಲ್ಲಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ರಾಜ್ಯಸಭೆ ಸಂಸದ ವಿ.ಮುರಳೀಧರನ್ ಮನೆ ಮೇಲೂ ಕಚ್ಚಾ ಬಾಂಬ್ ದಾಳಿ ನಡೆದಿದೆ. ಅದೃಷ್ಟವಶಾತ್, ಉಭಯ ಘಟನೆಗಳಲ್ಲಿ ಸಾವು–ನೋವು ಸಂಭವಿಸಿಲ್ಲ.

ದಾಳಿಯ ಹಿಂದೆ ಆಡಳಿತಾರೂಢ ಸಿಪಿಐ(ಎಂ) ಕೈವಾಡವಿದೆ ಎಂದು ಮುರಳೀಧರನ್ ಆರೋಪಿಸಿದ್ದಾರೆ. ತಮ್ಮ ಮನೆ ಮೇಲಿನ ದಾಳಿಯಲ್ಲಿ ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಶಂಸೀರ್ ಸಹ ಆರೋಪಿಸಿದ್ದಾರೆ.

ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ ನಂತರ ಉದ್ಭವಿಸಿರುವ ಹಿಂಸಾಚಾರಕ್ಕೆ ಸಂಬಂಧಿಸಿದ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದಾಗ ಮನೆ ಮೇಲೆ ದಾಳಿ ನಡೆದೆ ಎಂದು ಶಂಸೀರ್ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ. ರಾಜ್ಯದಲ್ಲಿದ್ದ ಶಾಂತಿಯುತ ವಾತಾವರಣವನ್ನು ಅವರು ಹಾಳು ಮಾಡುತ್ತಿದ್ದಾರೆ ಎಂದುಶಂಸೀರ್ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಈವರೆಗೆ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT