ಶನಿವಾರ, ಮೇ 21, 2022
28 °C
ಒ.ಪಿ.ರಾವತ್‌ – ಮುಖ್ಯ ಚುನಾವಣಾ ಆಯುಕ್ತ

ಚುನಾವಣೆ: ಕಪ್ಪುಹಣಕ್ಕೆ ಕಡಿವಾಣ ಅಸಾಧ್ಯ: ಒ.ಪಿ.ರಾವತ್‌ ಅಸಹಾಯಕತೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ‘ಚುನಾವಣೆಯಲ್ಲಿ ಕಪ್ಪುಹಣದ ಹಾವಳಿಗೆ ಈಗಿರುವ ಕಾನೂನು ಚೌಕಟ್ಟಿನಲ್ಲಿ ಕಡಿವಾಣ ಹಾಕುವುದು ಸಾಧ್ಯವಿಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಚುನಾವಣೆಗಳಲ್ಲಿ ಹರಿಯುತ್ತಿರುವ ಹಣದ ಹೊಳೆ ದೊಡ್ಡ ಸಮಸ್ಯೆಯಾಗಿದೆ. ಹಣಕಾಸು ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಬಹಳ ಚರ್ಚೆ ನಡೆಯುತ್ತಿವೆ. ಆದರೆ, ಈಗಿರುವ ಕಾನೂನು ಚೌಕಟ್ಟಿನಲ್ಲಿ  ಹಣ ಬಲ ನಿಯಂತ್ರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸುಧಾರಣಾ ಕ್ರಮಗಳನ್ನು ತರಲು ಆಯೋಗವು ಸಲಹೆ ನೀಡಿದೆ’ ಎಂದು ಹೇಳಿದ್ದಾರೆ.

ಶನಿವಾರ ‘ಭಾರತದ ಚುನಾವಣೆ ಪ್ರಜಾಪ್ರಭುತ್ವಕ್ಕೆ ಸವಾಲುಗಳು’ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ದತ್ತಾಂಶ ಕಳ್ಳತನ ಹಾಗೂ ಸುಳ್ಳುಸುದ್ದಿಗಳ ಹಾವಳಿ ಚುನಾವಣಾ ಪ್ರಕ್ರಿಯೆಗೆ ಮಾರಕವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ಸುಗಮವಾಗಿ ನಡೆಯಲು ಧೈರ್ಯ, ನಡತೆ, ಸಮಗ್ರತೆ ಮತ್ತು ಜ್ಞಾನದ ಸಂಪತ್ತು ಅವಶ್ಯ. ಆದರೆ, ಇಂದು ಇವೆಲ್ಲವೂ ಕುಸಿತದ ಹಾದಿಯಲ್ಲಿವೆ ಎಂದು ಬೇಸರಿಸಿದರು.

****

ಸುಳ್ಳುಸುದ್ದಿಗಳ ಹಾವಳಿಯಿಂದ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದೆ. ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸುಳ್ಳುಸುದ್ದಿಗಳು ಮಾರಕವಾಗಿ ಪರಿಣಮಿಸಿವೆ.

– ಒ.ಪಿ. ರಾವತ್‌, ಮುಖ್ಯ ಚುನಾವಣಾ ಆಯುಕ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು