ಫೋನಿ ಪರಿಣಾಮ: ಗುರುವಾರ ಸಂಜೆಯಿಂದಲೇ 103 ರೈಲುಗಳ ಸಂಚಾರ ರದ್ದು

ಸೋಮವಾರ, ಮೇ 27, 2019
23 °C

ಫೋನಿ ಪರಿಣಾಮ: ಗುರುವಾರ ಸಂಜೆಯಿಂದಲೇ 103 ರೈಲುಗಳ ಸಂಚಾರ ರದ್ದು

Published:
Updated:

ಭುವನೇಶ್ವರ: ಒಡಿಶಾಗೆ ಅಪ್ಪಳಿಸಲಿರುವ ಫೋನಿ ಚಂಡಮಾರುತವನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ರೈಲ್ವೆ ಇಲಾಖೆಯೂ ಪಶ್ಚಿಮ ಕರಾವಳಿ ವಲಯದ 103 ರೈಲುಗಳ ಸಂಚಾರವನ್ನು ಗುರುವಾರ ಸಂಜೆಯಿಂದಲೇ ನಿರ್ಬಂಧಿಸಿದೆ. ಇದರಲ್ಲಿ ಯಶವಂತಪುರ–ಮುಜಪ್ಫರಪುರ, ಭುವನೇಶ್ವರ್‌–ಬೆಂಗಳೂರಿನ ಪ್ರಶಾಂತಿ ಎಕ್ಸ್‌ಪ್ರೆಸ್‌, ಪುರಿ–ಯಶವಂತಪುರ ಗರೀಬ್‌ರಥ್‌, ಸಂತ್ರಾಗಜ್ಜಿ – ಮಂಗಳೂರು ನಡುವಿನ ವಿವೇಕ್‌ ಎಕ್ಸ್‌ಪ್ರೆಸ್‌, ಹೌರಾ–ಮೈಸರೂರು ಎಕ್ಸ್‌ಪ್ರೆಸ್‌ ಸೇರಿದಂತೆ  ಕರ್ನಾಟಕದ ಒಟ್ಟು 12ರೈಲುಗಳೂ ರದ್ದಾಗಿವೆ. 

ಗುರುವಾರ ರಾತ್ರಿಯಿಂದಲೇ ಈ ನಿರ್ಬಂಧ ಜಾರಿಗೆ ಬರಲಿದೆ ಎಂದು ಪಶ್ಚಿಮ ಕರಾವಳಿ ರೈಲ್ವೆ ಬಿಡುಗಡೆ ಮಾಡಿರುವ ಎರಡನೇ ಬುಲೆಟಿನ್‌ನಲ್ಲಿ ಹೇಳಲಾಗಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಬುಲೆಟಿನ್‌ಲ್ಲಿ 81ರೈಲುಗಳ ಸಂಚಾರವನ್ನು ರದ್ದು ಮಾಡಿರುವುದಾಗಿ ಹೇಳಲಾಗಿತ್ತು. ಆದರೆ, ನಂತರ ಆ ಸಂಖ್ಯೆ 103ಕ್ಕೆ ಏರಿದೆ. 

ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ... 

ರಾಜಧಾನಿ ಎಕ್ಸ್‌ಪ್ರೆಸ್‌, ಕೊನಾರ್ಕ್‌ ಎಕ್ಸ್‌ಪ್ರೆಸ್‌, ಶತಾಬ್ಧಿ ಎಕ್ಸ್‌ಪ್ರೆಸ್‌, ಇಂಟರ್‌ ಸಿಟಿ ಎಕ್ಸ್‌ಪ್ರೆಸ್‌, ದುರಂತೋ ಸೇರಿದಂತೆ ಹಲವು ಪ್ರಮುಖ ರೈಲುಗಳ ಸಂಚಾರ ಗುರುವಾರ ರಾತ್ರಿಯಿಂದ ರದ್ದಾಗಲಿಗಿದೆ. ಇದರ ಜತೆಗೇ, ವಿಶಾಖಪಟ್ಟಣಂ– ಅಮೃತಸರ ಹಿರಾಕುಡ್‌ ಎಕ್ಸ್‌ಪ್ರೆಸ್‌ ಮತ್ತು ಬೆಂಗಳೂರು–ಗುವಾಹಟಿ ಎಕ್ಸ್‌ ಪ್ರೆಸ್‌ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಹೌರಾದಿಂದ ಬೆಂಗಳೂರು, ಚೆನ್ನೈ, ಸಿಕಂದರಾಬಾದ್‌ಗೆ ತೆರಳು ರೈಲುಗಳೂ ಗುರುವಾರ ಸಂಜೆಯೇ ನಿಲ್ಲಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !