ಸೋಮವಾರ, ಏಪ್ರಿಲ್ 6, 2020
19 °C

ದಾಭೋಲ್ಕರ್‌ ಹತ್ಯೆಗೆ ಬಳಸಿದ್ದ ಪಿಸ್ತೂಲು ವಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ತನಿಖೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಎಂದು ಹೇಳಲಾಗಿರುವ ಪಿಸ್ತೂಲು ಅನ್ನು ಸಿಬಿಐ ಅಧಿಕಾರಿಗಳು ವಿಭಿನ್ನ ಕಾರ್ಯಾಚರಣೆ ನಡೆಸಿ ವಶಕ್ಕೆಪಡೆದುಕೊಂಡಿದ್ದಾರೆ.

ದುಬೈ ಮೂಲದ ಕಂಪನಿಯ ನೆರವು ಪಡೆದು, ನಾರ್ವೆಯ ಪರಿಕರಗಳ ಸಹಾಯದಿಂದ ವಶಕ್ಕೆ ಪಡೆಯಲಾಗಿದೆ. ಸಾಗರತೀರದಲ್ಲಿ ಮರಳಿನಲ್ಲಿ 40 ಅಡಿ ಆಳದಲ್ಲಿ ಹುದುಗಿಸಿದ್ದ ಗನ್‌ ಅನ್ನು ವಶಕ್ಕೆ ಮಹಾರಾಷ್ಟ್ರದ ಠಾಣೆ ಬಳಿ ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗನ್‌ ಅನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ಒಟ್ಟು ₹ 7.5 ಕೋಟಿ ವೆಚ್ಚವಾಗಿವೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ಇದನ್ನು ಭರಿಸಿವೆ.

ವಿಚಾರವಾದಿಗಳಾದ ದಾಭೋಲ್ಕರ್‌, ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ಗೋವೀಂದ ಪಾನ್ಸಾರೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಕಾರ್ಯಶೈಲಿ ಬಹುತೇಕ ಏಕರೂಪದಲ್ಲಿತ್ತು.

ಆಗಸ್ಟ್‌ 20, 2013ರಲ್ಲಿ ನಡೆದ ದಾಭೋಲ್ಕರ್‌ ಹತ್ಯೆ ಪ್ರಕರಣವನ್ನು ಸಿಬಿಐ ನಡೆಸುತ್ತಿದೆ. ಕರ್ನಾಟಕ ಪೊಲೀಸರು ಗೌರಿಲಂಕೇಶ್‌, ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು