ಸೋಮವಾರ, ಆಗಸ್ಟ್ 2, 2021
25 °C

ಮರುಜೀವ ನಿರೀಕ್ಷೆಯಲ್ಲಿ ಅಮ್ಮನ ಶವದ ಮುಂದೆ 3 ದಿನ ಕಳೆದ ಮಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ತಾಯಿಗೆ ಮರಳಿ ಜೀವ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಮಗಳೊಬ್ಬಳು ಮೃತದೇಹದ ಮುಂದೆ ಮೂರು ದಿನ ಕಳೆದ ಘಟನೆ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಡೆದಿದೆ. 

ನಿವೃತ್ತ ಶಾಲಾ ಶಿಕ್ಷಕಿ ಒಮಾನಾ (72) ಮೃತಪಟ್ಟವರು. ಅವರ ಮಗಳು ಕವಿತಾ (42) ಹೋಮಿಯೋಪಥಿ ವೈದ್ಯೆಯಾಗಿದ್ದು, ತಾಯಿ ತೀರಿಹೋದ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ.

‘ಒಮಾನಾ ಅವರು ಕಳೆದ ಭಾನುವಾರ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕವಿತಾ ಅವರು ತಾಯಿಗೆ ಜೀವ ನೀಡುವಂತೆ ದೇವರಲ್ಲಿ ಸತತವಾಗಿ ಮೂರು ದಿನ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದರೆ, ಮರಳಿ ಜೀವ ಬಾರದಿದ್ದಾಗ ಭರವಸೆ ಕಳೆದುಕೊಂಡು ನೆರೆಹೊರೆಯವರಿಗೆ ತಾಯಿ ತೀರಿಹೋದ ವಿಷಯ ತಿಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕವಿತಾ ಅವರು ತಾಯಿಯ ಸಾವಿನಿಂದ ಮಾನಸಿಕವಾಗಿ ಕುಗ್ಗಿ ಹೋಗಿರಬಹುದು. ಬಹಳ ವರ್ಷಗಳ ಹಿಂದೆಯೇ ಅವರ ತಂದೆ ಸಾವನ್ನಪ್ಪಿದ್ದಾರೆ. ಅಮ್ಮನ ಹೊರತಾಗಿ ಅವರಿಗೆ ಬೇರೆ ಯಾರೂ ಇರಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.