ಸೋಮವಾರ, ಫೆಬ್ರವರಿ 17, 2020
30 °C

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಗೆ ಕೊಲೆ ಬೆದರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ಅವರ ವೈಯಕ್ತಿಕ ನಂಬರ್‌ಗೆ ಕೊಲೆ ಬೆದರಿಕೆ ಒಡ್ಡಿರುವ ಸಂದೇಶವೊಂದು ಬಂದಿದೆ.

‘ನಿಮ್ಮನ್ನು ಕೊಲೆ ಮಾಡುವುದಕ್ಕೆ ನನ್ನ ಮೇಲೆ ಬಲವಾದ ಒತ್ತಡ ಇದೆ. ಅಗತ್ಯಬಿದ್ದರೆ ಪ್ರಧಾನಿಯನ್ನೂ ಕೊಲ್ಲುತ್ತೇನೆ’ ಎಂದು ಅಪರಿಚಿತ ವ್ಯಕ್ತಿ ಸಂದೇಶದಲ್ಲಿ ಹೇಳಿದ್ದಾನೆ.

ಮತ್ತೊಂದು ಸಂದೇಶದಲ್ಲಿ ಕೊಲೆ ಬೆದರಿಕೆ ಒಡ್ಡಿದ್ದಕ್ಕಾಗಿ ಕ್ಷಮೆಯನ್ನೂ ಅಪರಿಚಿತ ಕೇಳಿದ್ದಾನೆ.‘ಕೊಲೆ ಬೆದರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’ ಎಂದು ಮನೋಜ್ ತಿವಾರಿ ಹೇಳಿದ್ದಾರೆ.

‘ಬೆದರಿಕೆ ಕುರಿತು ಶ್ರೀಘ್ರದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ದೆಹಲಿಯ ಬಿಜೆಪಿ ಮಾಧ್ಯಮ ಸಂಪರ್ಕ ವಿಭಾಗದ ಮುಖ್ಯಸ್ಥ ನೀಲಕಂಠ್‌ ಭಕ್ಷಿ ಹೇಳಿದರು.

‘ಶುಕ್ರವಾರ ಮಧ್ಯಾಹ್ನ 12.52ರ ವೇಳೆಗೆ ಸಂದೇಶ ಬಂದಿದ್ದು, ತಿವಾರಿ ಅವರು ಶನಿವಾರ ಸಂಜೆ ಸಂದೇಶ ಓದಿದ್ದಾರೆ. ಓದಿದ ತಕ್ಷಣದಲ್ಲಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು