ಶುಕ್ರವಾರ, ಸೆಪ್ಟೆಂಬರ್ 17, 2021
29 °C

ದೆಹಲಿ ಫಲಿತಾಂಶ: ಆಮ್ ಆದ್ಮಿಗೆ ಮತ್ತೊಂದು ಭರ್ಜರಿ ಗೆಲುವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Arvind Kejriwal

ನವದೆಹಲಿ: ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ದೆಹಲಿ ವಿಧಾನಸಭಾ ಚುನಾವಣೆ - 2020 ಫಲಿತಾಂಶಗಳು ಅಧಿಕಾರಾರೂಢ ಆಮ್ ಆದ್ಮಿ ಪಕ್ಷವನ್ನು ಮರಳಿ ರಾಜಧಾನಿಯ ಗದ್ದುಗೆಗೆ ಏರಿಸಿದೆ. ಕಳೆದ ಬಾರಿಯ ತನ್ನ ಪಾಲಿನಿಂದ 4 ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದರೂ, ವಿಧಾನಸಭೆಯ 70 ಸ್ಥಾನಗಳಲ್ಲಿ 62ರಲ್ಲಿ ಗೆಲುವು/ಮುನ್ನಡೆ ಸಾಧಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರವೇರುತ್ತಿದೆ.

ಇತ್ತೀಚಿನ ಚುನಾವಣಾ ಆಯೋಗ ಪ್ರಕಟಣೆಯ ಪ್ರಕಾರ, ಆಮ್ ಆದ್ಮಿ ಪಾರ್ಟಿಯು ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ದಾಟಿ, 36 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇನ್ನೂ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಸಮೀಪದ ಪ್ರತಿಸ್ಫರ್ಧಿ ಬಿಜೆಪಿ ಗರಿಷ್ಠ 8 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ.

ಅರವಿಂದ ಕೇಜ್ರಿವಾಲ್ ಅವರು 3ನೇ ಬಾರಿ ದೆಹಲಿ ಗದ್ದುಗೆಯೇರಲು ಸಿದ್ಧತೆ ನಡೆಸಿದ್ದು, 2015ರಲ್ಲಿ 67 ಸ್ಥಾನಗಳಲ್ಲಿ ಅವರ ಪಕ್ಷವು ಗೆಲುವು ಸಾಧಿಸಿತ್ತು. ಈ ಬಾರಿ ಗೆಲುವಿನ ಸಂಖ್ಯೆ ಕುಸಿತವಾಗುವುದು ನಿಚ್ಚಳವಾಗುತ್ತಿದ್ದರೆ, ಕಳೆದ ಬಾರಿ 3 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿದ್ದ ಬಿಜೆಪಿ, ಈ ಬಾರಿ ಸ್ಥಾನದ ಸಂಖ್ಯೆಯನ್ನು ಹೆಚ್ಚಿಸಿಕೊಂಡರೂ ಎರಡಂಕಿ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಈ ಬಾರಿಯೂ ಸೊನ್ನೆ ಸುತ್ತಿದೆ.

ಇದನ್ನೂ ಓದಿ: ದೆಹಲಿ ಫಲಿತಾಂಶ Live | 58ರಲ್ಲಿ ಆಪ್, 12ರಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೆಸ್ ಶೂನ್ಯ

ದೆಹಲಿ ಚುನಾವಣೆಗಳ ಪ್ರಚಾರದಲ್ಲಿಯೂ ಭರ್ಜರಿ ಉತ್ಸಾಹ ತೋರಿಸದೇ ಇದ್ದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ. 5 ಗಂಟೆಯ ಟ್ರೆಂಡ್ ಪ್ರಕಾರ ಆಪ್ 62 ಹಾಗೂ ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು/ಮುನ್ನಡೆ ಸಾಧಿಸಿದ್ದವು.

ಇದನ್ನೂ ಓದಿ: 

70 ಮಂದಿ ಸದಸ್ಯರುಳ್ಳ ದೆಹಲಿ ವಿಧಾನಸಭೆಯಲ್ಲಿ ಪ್ರಸ್ತುತ (2015ರ ಫಲಿತಾಂಶ ಪ್ರಕಾರ) ಆಮ್ ಆದ್ಮಿ ಪಕ್ಷವು 67 ಹಾಗೂ ಬಿಜೆಪಿ 3 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಯಾವುದೇ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿತ್ತು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು