ಗುರುವಾರ , ಜುಲೈ 29, 2021
20 °C

ದೆಹಲಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಪಾಕ್ ಹೈಕಮಿಷನ್ ಅಧಿಕಾರಿಗಳು ವಶಕ್ಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Abid and Tahir

ದೆಹಲಿ: ವೀಸಾ ಅಧಿಕಾರಿಗಳ ಸೋಗಿನಲ್ಲಿ ಪಾಕಿಸ್ತಾನದ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ದೆಹಲಿ ಪೊಲೀಸರ ವಿಶೇಷ ತಂಡ ಭಾನುವಾರ ವಶಕ್ಕೆ ತೆಗೆದುಕೊಂಡಿದೆ. ಐಎಸ್‌ಐ ಬೇಹುಗಾರರಾಗಿದ್ದ ಇವರನ್ನು ಅಬಿದ್ ಹುಸೇನ್ ಮತ್ತು ತಾಹೀರ್ ಖಾನ್ ಎಂದು ಗುರುತಿಸಲಾಗಿದೆ.

ಬೇಹುಗಾರಿಕೆ ನಡೆಸುತ್ತಿದ್ದ ವೇಳೆ ಇವರನ್ನು ವಶಕ್ಕೆ ತೆಗೆದುಕೊಂಡಿದ್ದು  ದೆಹಲಿ ಪೊಲೀಸರ ವಿಶೇಷ ತಂಡ ಮತ್ತು ಇತರ ಸಂಸ್ಥೆಗಳು ಇವರನ್ನು ವಿಚಾರಣೆಗೊಳಪಡಿಸಿವೆ. ಗುಪ್ತಚರ ಇಲಾಖೆಯ ಮಾಹಿತಿ ಲಭಿಸಿದ್ದರಿಂದ ಇವರ ಮೇಲೆ ಕಣ್ಣಿಡಲಾಗಿತ್ತು. ಅಬೀದ್ ಹುಸೇನ್ ಮತ್ತು ತಾಹೀರ್ ಖಾನ್‌ನ್ನು  ಭಾನುವಾರ ಬೆಳಗ್ಗೆ ಕರೋಲ್‌ಭಾಗ್‌ನಲ್ಲಿ ವಶಕ್ಕೆ ಪಡೆದುಕೊಂಡಿದ್ದು, ಅಲ್ಲಿ ಅವರು ಭಾರತೀಯ ಭದ್ರತಾ ವ್ಯವಸ್ಥೆಯ ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ವ್ಯಕ್ತಿಯನ್ನು ಭೇಟಿಯಾಗುತ್ತಿದ್ದರು. ಆ ವ್ಯಕ್ತಿಗೆ  ₹ 15 ಸಾವಿರ ನಗದು ಮತ್ತು ಐಫೋನ್ ನೀಡುತ್ತಿದ್ದ ವೇಳೆ ಇವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಜಾವೇದ್ ಹುಸೇನ್ ಎಂಬ ವ್ಯಕ್ತಿ ಕೂಡಾ ಸ್ಥಳದಲ್ಲಿದ್ದು, ಪಾಕಿಸ್ತಾನದ ಮೂಲದ ಆತನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿಮೂಲಗಳು ಹೇಳಿವೆ.

ನಕಲಿ ಆಧಾರ್ ಕಾರ್ಡ್‌ ಹೊಂದಿರುವ ಅಬೀದ್ ಮತ್ತು ತಾಹೀರ್ ಭಾರತೀಯ ಪ್ರಜೆಗಳು ಎಂದು ಹೇಳಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. 
ಪಾಕಿಸ್ತಾನದ ಶೇಖ್‌ಪುರ್ ನಿವಾಸಿಯಾಗಿದ್ದಾರೆ 42ರ ಅಬೀದ್, ಅದೇ ವೇಳೆ ತಾಹೀರ್ ಇಸ್ಲಾಮಾಬಾದ್ ಮತ್ತು  ಜಾವೇದ್ ಹುಸೇನ್ ಪಾಕಿಸ್ತಾನದ ಭಕ್ಕರ್ ನಿವಾಸಿಯಾಗಿದ್ದಾರೆ.
ತಾಹಿರ್ ಮತ್ತು ಅಬಿದ್ ಇಬ್ಬರನ್ನೂ ವ್ಯಕ್ತಿತ್ವ ರಹಿತರು ಎಂದು ಘೋಷಿಸಲಾಗಿದ್ದು 24 ಗಂಟೆಯೊಳಗೆ ದೇಶವನ್ನು ತೊರೆಯುವಂತೆ ನಿರ್ದೇಶಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು