ಶುಕ್ರವಾರ, ಡಿಸೆಂಬರ್ 13, 2019
27 °C

ನವದೆಹಲಿ: ಮೂರನೇ ದಿನವೂ ವಾಯು ಗುಣಮಟ್ಟ ಕಳಪೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರನೇ ದಿನವೂ ವಾಯು ಗುಣಮಟ್ಟ ಕಳಪೆಯಾಗಿತ್ತು. ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಬುಧವಾರ (ಎಕ್ಯೂಐ) 413 ಅಂಶ ದಾಖಲಾಗಿದೆ. 

ಆರೋಗ್ಯವಂತ ಜನರೂ ಉಸಿರಾಡಲು ಕಷ್ಟಪಡುವ ಸ್ಥಿತಿ ಇದೆ ಎಂದು ತಜ್ಞರು ಹೇಳಿದ್ದಾರೆ. ಪಕ್ಕದ ಗಾಜಿಯಾಬಾದ್ (429 ಅಂಶ) ಹಾಗೂ ನೊಯಿಡಾ, ಹಾಗೂ ಫರೀಬಾದಾದ್‌ನಲ್ಲಿ ವಾಯುಗುಣಾಂಕ ತೀರಾ ಕಳಪೆ ಎನಿಸಿದೆ.

28 ವರ್ಷಗಳಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಸ್ಥಿತಿಗೆ ತಲುಪಿದೆ. ರೋಹಿಣಿ, ಬವಾನಾ, ಅಶೋಕ್ ವಿಹಾರ್ ಮತ್ತು ವಾಜೀಪುರ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು