ಮಂಗಳವಾರ, ಮೇ 18, 2021
22 °C
ಐಸಿಎಂಆರ್– ಪಿಎಚ್‌ಎಫ್‌ಇ ಸಹಯೋಗದಲ್ಲಿ ಅಧ್ಯಯನ

7 ಮಂದಿಯಲ್ಲಿ ಒಬ್ಬರಿಗೆ ಖಿನ್ನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : 2017ರಲ್ಲಿ ದೇಶದ ಪ್ರತಿ 7 ಮಂದಿಯಲ್ಲಿ ಒಬ್ಬರು ಮಾನಸಿಕ ರೋಗದಿಂದ ಬಳಲಿದ್ದು, ಇವರಲ್ಲಿ ಖಿನ್ನತೆ ಮತ್ತು ಭಾವೋದ್ರೇಕಕ್ಕೆ ಒಳಗಾದವರು ಹೆಚ್ಚು ಎಂದು ಅಧ್ಯಯನ ತಿಳಿಸಿದೆ. 

ಮಾನಸಿಕ ಅಸ್ವಸ್ಥತೆಯ 10 ವಿಭಾಗಗಳಲ್ಲಿ ಕರ್ನಾಟಕವು 6ರಲ್ಲಿ ದೇಶದ ಸರಾಸರಿಗಿಂತ ಅಧಿಕ ರೋಗಿಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆ. 

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್), ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ (ಪಿಎಚ್‌ಎಫ್‌ಇ) ಸಹಯೋಗದಲ್ಲಿ ‘ಇಂಡಿಯಾ ಸ್ಟೇಟ್‌ ಲೆವೆಲ್‌ ಡಿಸೀಸ್‌ ಬರ್ಡನ್‌ ಇನಿಷಿಯೇಟಿವ್’ ಈ ಅಧ್ಯಯನವನ್ನು ಭಾರತದ ಎಲ್ಲ ರಾಜ್ಯಗಳಲ್ಲಿ ನಡೆಸಿದ್ದು, ವರದಿಯನ್ನು ‘ಲ್ಯಾನ್ಸೆಟ್ ಸೈಕಿಯಾಟ್ರಿ’ ನಿಯತಕಾಲಿಕೆಯು ಪ್ರಕಟಿಸಿದೆ. 

ಅಧ್ಯಯನಕ್ಕೆ ಮೂರು ದಶಕಗಳಲ್ಲಿ ಸಂಗ್ರಹಿಸಲಾದ ವೈದ್ಯಕೀಯ ದತ್ತಾಂಶವನ್ನು ಬಳಸಿಕೊಳ್ಳಲಾಗಿದೆ. 1990ರಲ್ಲಿ ಮೊದಲ ವರದಿಯನ್ನು ‘ಲ್ಯಾನ್ಸೆಟ್ ಸೈಕಿಯಾಟ್ರಿ’ಯಲ್ಲಿಯೇ ಪ್ರಕಟಿಸಲಾಗಿತ್ತು.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರ ಸಂಖ್ಯೆಯು 1990–2017ರ ಅವಧಿಯಲ್ಲಿ ದ್ವಿಗುಣಗೊಂಡಿದೆ. ಸ್ಕಿಜೋಫ್ರೇನಿಯಾ, ಖಿನ್ನತೆ, ಭಾವೋದ್ರೇಕ, ಉನ್ಮಾದ ಖಿನ್ನತೆಯ ಕಾಯಿಲೆ (ಬೈಪೋಲಾರ್‌ ಡಿಸಾರ್ಡರ್), ನರರೋಗ ಸಮಸ್ಯೆ (ಆಟಿಸಂ) ಸೇರಿದಂತೆ ರೋಗಗಳು ಭಾರತದ ಕೋಟ್ಯಂತರ ಮಂದಿಯನ್ನು ಬಾಧಿಸುತ್ತಿದೆ. ಇದನ್ನು ನಿವಾರಿಸಲು ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂಬ ಸಲಹೆಯನ್ನೂ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು