ಕೊರೊನಾ ಸೋಂಕು ಕಾಲ, ದೇಶವನ್ನು ಮೀರಿ ವ್ಯಾಪಿಸುತ್ತಿರುವ ನಡುವೆಯೇ, ಇಂಥದ್ದೊಂದು ಕಾಯಿಲೆ 2020ರಲ್ಲಿ ಜಗತ್ತಿನ್ನು ಆವರಿಸಲಿದೆ ಎಂದು 2008ರಲ್ಲಿ ಪ್ರಕಟವಾಗಿದ್ದ ಪುಸ್ತಕವೊಂದರಲ್ಲಿ ಲೇಖಕಿಯೊಬ್ಬರು ನಿಖರವಾಗಿ ಹೇಳಿರುವುದು ಬಹಿರಂಗವಾಗಿದೆ.

ದಿವಂಗತ ಸೈಲ್ವಿಯಾ ಬ್ರೌನ್ ಎಂಬುವವರು 2008ರಲ್ಲಿ ಬರೆದಿದ್ದ ‘ಎಂಡ್ ಅಫ್ ದ ಡೇ‘ ಪುಸ್ತಕದಲ್ಲಿ ಇಂಥದ್ದೊಂದು ಉಲ್ಲೇಖವಿದ್ದು, ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ಪುಸ್ತಕ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲೂ ಲಭ್ಯವಿದೆ.

‘ಮಹಾಮಾರಿಯೊಂದು2020ರಲ್ಲಿ ಜಗತ್ತಿನಾದ್ಯಂತ ದಾಳಿ ಮಾಡಲಿದೆ,’ ಎಂದು ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

‘ಜಗತ್ತಿನಲ್ಲಿರುವ ಎಲ್ಲ ಔಷಧ, ಚಿಕಿತ್ಸೆಗಳಿಗೆ ಪ್ರತಿರೋಧ ಹೊಂದಿರುವ, ಶ್ವಾಸಕೋಶ, ಶ್ವಾಸನಾಳದ ಮೇಲೆ ದಾಳಿ ಮಾಡುವ, ನ್ಯುಮೋನಿಯಾ ಮಾದರಿಯ ಕಾಯಿಲೆಯೊಂದು 2020ರಲ್ಲಿ ಜಗತ್ತನ್ನು ಆವರಿಸಲಿದೆ. ಬಂದಷ್ಟೇ ವೇಗವಾಗಿ ಅದು ಮರೆಯಾಗುತ್ತದೆ. ಹತ್ತು ವರ್ಷಗಳ ನಂತರ ಅದು ಮತ್ತೆ ಬರುತ್ತದೆ. ನಂತರ ಶಾಶ್ವತವಾಗಿ ಇಲ್ಲವಾಗುತ್ತದೆ,’ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

1981ರ ಕಾದಂಬರಿಯಲ್ಲೂ ಉಲ್ಲೇಖ

1981ರಲ್ಲಿ ಪ್ರಕಟವಾಗಿದ್ದ ಲೇಖಕ ಡೀನ್ ಕೂಂಟ್ಸ್ ಅವರ ‘ದಿ ಐಸ್ ಆಫ್ ಡಾರ್ಕ್‌ನೆಸ್’ ಎಂಬ ಪುಸ್ತಕದಕ್ಕೂ ಇಂಥದ್ದೇ ಕಾಯಿಲೆಯೊಂದರ ಉಲ್ಲೇಖವಿದೆ. ಇಷ್ಟೇ ಅಲ್ಲ, ಈ ವ್ಯಾದಿ ಚೀನಾದ ವುಹಾನ್‌ನಿಂದಲೇ ಬರುತ್ತದೆ ಎಂದು ಕಾದಂಬರಿಯಲ್ಲಿ ಹೇಳಲಾಗಿದೆ. ಕಾಕತಾಳಿಯವೆಂದರೆ, ಸದ್ಯ ಜಗತ್ತನ್ನು ಆವರಿಸುತ್ತಿರುವ ಕೊರೊನಾ ವೈರಸ್‌ನ ತಾಯ್ನಾಡು ಚೀನಾದ ವುಹಾನ್ ಪ್ರಾಂತ್ಯ.

ಪುಸ್ತಕದ ಸಾಲುಗಳು ಸದ್ಯ ಸಾಮಾಜಿಕ ಜಾಲತಾಣಿಗರನ್ನು ಗೊಂದಲಕ್ಕೆ ದೂಡಿದ್ದು, ಲೇಖಕ ಬರೆದಿದ್ದು ಕೊರೊನಾ ವೈರಸ್ ಬಗ್ಗೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.