ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿ ಶಾಸಕರ ಸೇರ್ಪಡೆಗೆ ಬಿಜೆಪಿಯಲ್ಲೇ ಅಪಸ್ವರ

ಆರ್‌ಎಸ್‌ಎಸ್‌ನ ನಾಯಕರಿಗೂ ಅಸಮಾಧಾನ
Last Updated 1 ಜೂನ್ 2019, 20:15 IST
ಅಕ್ಷರ ಗಾತ್ರ

ಕೋಲ್ಕತ್ತ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ಸಂಸದರು, ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿ ಮುಖಂಡರ ಕಾರ್ಯತಂತ್ರಕ್ಕೆ ಪಕ್ಷದೊಳಗೆ ಅಪಸ್ವರ ವ್ಯಕ್ತವಾಗಿದೆ.

ಟಿಎಂಸಿ ನಾಯಕರ ಸೇರ್ಪಡೆ ಬಗ್ಗೆ ಬಿಜೆಪಿಯ ಕೆಲ ಮುಖಂಡರಿಗೆ ಮೊದಲೇ ಅಸಮಾಧಾನವಿತ್ತು. ಲಾಭ್‌ಪುರ್‌ ಕ್ಷೇತ್ರದ ಶಾಸಕ ಮನಿರುಲ್ ಇಸ್ಲಾಂ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ ನಂತರ ಅಸಮಾಧಾನ ಬಹಿರಂಗವಾಗಿದೆ.

ಮನಿರುಲ್‌ ಸೇರ್ಪಡೆಗೆ ಕೆಲ ಮುಖಂಡರು ಪಕ್ಷದ ವೇದಿಕೆಯಲ್ಲಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇವರ ಸೇರ್ಪಡೆಯನ್ನು ವಿರೋಧಿಸಿ ಪಕ್ಷದಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಆರ್‌ಎಸ್‌ಎಸ್‌ನ ಕೆಲವು ನಾಯಕರೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಮನಿರುಲ್‌ ಇಸ್ಲಾಂ ಅವರ ದೌರ್ಜನ್ಯವನ್ನು ಖಂಡಿಸಿಯೇಬಿರ್‌ಭುಮ್‌ ಜಿಲ್ಲೆಯ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಿರುವಾಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಜನರಿಗೆ ಏನು ಸಂದೇಶ ನೀಡುತ್ತಿದ್ದೀರಿ’ ಎಂದು ಹೌರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಂತಿದೇವ್‌ ಸೇನ್‌ಗುಪ್ತ ಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ.

‘ಬಿಜೆಪಿಯ ಜಿಲ್ಲಾ ಘಟಕವು ಮನಿರುಲ್‌ ಅವರನ್ನು ನಾಯಕ ಎಂದು ಒಪ್ಪುವುದಿಲ್ಲ. ನಾವು ಅವರನ್ನು ಕಡೆಗಣಿಸುತ್ತೇವೆ. ಆ ಕಾರಣಕ್ಕೆ ನಮ್ಮನ್ನು ಪಕ್ಷದಿಂದ ಕೈಬಿಟ್ಟರೂ ಬೇಸರವಿಲ್ಲ’ ಎಂದು ಬಿಜೆಪಿಯ ಬಿರ್‌ಭುಮ್‌ ಜಿಲ್ಲೆಯ ಮುಖಂಡ ಕಲೊಸೊನಾ ಮಂಡಲ್‌ ಹೇಳಿದ್ದಾರೆ.

ಮನಿರುಲ್‌ ಇಸ್ಲಾಂ ಅವರನ್ನು ಪಕ್ಷಕ್ಕೆ ಸೇರಿಸುವ ಮೂಲಕ ‘ಅಲ್ಪಸಂಖ್ಯಾತ ಸಮುದಾಯದವರನ್ನೂ ಬಿಜೆಪಿ ಸ್ವಾಗತಿಸುತ್ತದೆ’ ಎಂಬ ಸಂದೇಶವನ್ನು ನೀಡಲು ಪಕ್ಷ ಬಯಸಿದೆ. ಜೊತೆಗೆ ಟಿಎಂಸಿಯಿಂದ ಇನ್ನಷ್ಟು ನಾಯಕರನ್ನು ಸೆಳೆಯುವ ಉದ್ದೇಶವೂ ಇದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT