ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಶಿವಕುಮಾರ್‌ಗೆ ಸಿಗದ ಜಾಮೀನು

Last Updated 25 ಸೆಪ್ಟೆಂಬರ್ 2019, 16:22 IST
ಅಕ್ಷರ ಗಾತ್ರ

ಹಣಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಮುಖಂಡ ಡಿ.ಕೆ ಶಿವಕುಮಾರ್‌ ಅವರು ಜಾಮೀನು ಕೋರಿ ಸಲ್ಲಿಸಿರುವಅರ್ಜಿಯ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಅದರ ಅಂತಿಮ ತೀರ್ಪನ್ನು ದೆಹಲಿಯ ರೋಸ್‌ ಅವೆನ್ಯೂ ರಸ್ತೆಯಲ್ಲಿರುವ ವಿಶೇಷ ನ್ಯಾಯಾಲಯ ಬುಧವಾರ ಪ್ರಕಟಿಸಲಿದೆ.ಈ ಮಹತ್ವದ ಬೆಳವಣಿಗೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.

***

05.36– ಪ್ರಕರಣಗಳು ಬಾಕಿ ಇರುವುದರಿಂದ ಜಾಮೀನು ಸಿಕ್ಕಿಲ್ಲ: ಡಿಕೆ ಸುರೇಶ್‌ ಹೇಳಿಕೆ

ಡಿ.ಕೆ‌.‌ಶಿವಕುಮಾರ್ ಅವರಿಗೆ ಸಂಬಂಧಿಸಿದ‌ ಪ್ರಕರಣ ಬಾಕಿ ಇರುವುದರಿಂದ ಜಾಮೀನು ನೀಡಲಾಗದು ಎಂದು ಇ.ಡಿ.‌ವಿಶೇಷ ನ್ಯಾಯಾಲಯದ‌ ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಶಿವಕುಮಾರ್ ಅವರ ಆರೋಗ್ಯ ಕುರಿತು ಕಾರಾಗೃಹ ಅಧಿಕಾರಿಗಳು ನಿಗಾ ವಹಿಸುವ ‌ಭರವಸೆಯನ್ನು ನ್ಯಾಯಾಲಯ ನೀಡಿದೆ ಎಂದು ಸಂಸದ ಡಿ.ಕೆ.‌ ಸುರೇಶ ತಿಳಿಸಿದರು.

ಡಿಕೆಶಿ‌ ಜಾಮೀನು ಅರ್ಜಿ ವಜಾಗೊಳಿಸಿ‌ವಲ ನ್ಯಾಯಾಲಯ ಆದೇಶ ನೀಡಿದ‌ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ‌ ನ್ಯಾಯ ಸಿಗುವ ಭರವಸೆ ‌ಇದೆ ಎಂದರು

ಪ್ರಭಾವಿಯಾದ‌ ಆರೋಪಿಯು ೩೧೭ ಖಾತೆ‌ ಹೊಂದಿದ್ದು ತನಿಖೆ ಮುಂದುವರಿಯಬೇಕಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿವಕುಮಾರ್ ಅವರು ಆರೋಗ್ಯವಾಗಿದ್ದಾರೆ. ನ್ಯಾಯಾಲಯದ‌ ಮೇಲೆ ನಮಗೆ ಭರವಸೆ‌ ಇದೆ. ಅಭಿಮಾನಿಗಳು ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡಬಾರದು ಎಂದು ಅವರು ಮನವಿ ಮಾಡಿದರು.

05.15–ಡಿ.ಕೆ ಶಿವಕುಮಾರ್‌ ಅವರ ಜಾಮೀನು ಅರ್ಜಿಯನ್ನು ದೆಹಲಿಯ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಡಿಕೆಶಿ ತಿಹಾರ್‌ ಜೈಲು ವಾಸಮುಂದುವರಿದಿದೆ.

04.10–ದೆಹಲಿಯ ರೋಸ್‌ ಅವೆನ್ಯೂ ರಸ್ತೆಯಲ್ಲಿರುವ ನ್ಯಾಯಾಲಯದ ಅವರಣದಲ್ಲಿ ಡಿಕೆ ಶಿವಕುಮಾರ್‌ ಅವರ ಪರ ಬೆಂಬಲಿಗರು ಭಾರಿ ಪ್ರಮಾಣದಲ್ಲಿ ಜಮಾಯಿಸಿದ್ದಾರೆ. ಹೀಗಾಗಿ ಕೋರ್ಟ್‌ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿದೆ.

03.42–ಕೋರ್ಟ್‌ ಹಾಲ್‌ಗೆ ಡಿಕೆಶಿ ಪರ, ಇಡಿ ಪರ ವಕೀಲರ ಆಗಮನ

03.40– ಕೋರ್ಟ್ ಹಾಲ್‌ಗೆ ಡಿಕೆಶಿ ಸೋದರ ಡಿ.ಕೆ ಸುರೇಶ್ ಆಗಮನ

03.27– ಕೋರ್ಟ್‌ ಹಾಲ್‌ಗೆ ಆಗಮಿಸಿದ ಡಿ.ಕೆ ಶಿವಕುಮಾರ್ ಪರ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT