ಡಿಎಂಕೆ ಮುಖ್ಯಸ್ಥ ಕರುಣಾನಿಧಿ ನಿಧನ

7

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ನಿಧನ

Published:
Updated:

ಚೆನ್ನೈ: ತಮಿಳ್ನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಮಂಗಳವಾರ ಸಂಜೆ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವಯಸ್ಸಾಗಿತ್ತು.

ಮೂತ್ರನಾಳದ ಸೋಂಕು ಮತ್ತು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕರುಣಾನಿಧಿ ಅವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಕುಸಿದಿದೆ ಎಂದು ಕಾವೇರಿ ಆಸ್ಪತ್ರೆ ಸಂಜೆ 4.30 ಗಂಟೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು, ಇದಾದ ನಂತರ ಸಂಜೆ 6.10ಕ್ಕೆ ಕರುಣಾನಿಧಿ ಇನ್ನಿಲ್ಲ ಎಂಬ ಸುದ್ದಿಯನ್ನು ಆಸ್ಪತ್ರೆ ಅಧಿಕಾರಿಗಳು ಪ್ರಕಟಿಸಿದ್ದಾರೆ.

ಕರುಣಾನಿಧಿ ಅವರ ಆಂತರಿಕ ಅವಯವಗಳ ಕಾರ್ಯ ಚಟುವಟಿಕೆ ಸಹಜ ಸ್ಥಿತಿಯಲ್ಲಿ ಇಲ್ಲ. ಮುಂದಿನ 24 ಗಂಟೆಗಳ ನಂತರವೇ ಆರೋಗ್ಯ ಸ್ಥಿತಿ ಬಗ್ಗೆ ಹೇಳಲಾಗುವುದು ಎಂದು ಸೋಮವಾರ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರುವ ಕರುಣಾನಿಧಿಯವರ ಆರೋಗ್ಯ ಕೆಲವು ದಿನಗಳ ಹಿಂದೆ ಚೇತರಿಸಿಕೊಂಡಿತ್ತು. ಆದರೆ, ಸೋಮವಾರ ಸಂಜೆ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾಗಿದೆ ಎಂದು ಬಲ್ಲಮೂಲಗಳು ವರದಿ ಮಾಡಿದ್ದವು. ಮಂಗಳವಾರ ಸಂಜೆ ಹೊತ್ತಿಗೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿತ್ತು.

ಕರುಣಾನಿಧಿ ಅವರ ಸಾವಿನ ಸುದ್ದಿ ಕೇಳಿದ ಅಭಿಮಾನಿಗಳು ಆಸ್ಪತ್ರೆಯ ಮುಂದೆ ರೋಧಿಸುತ್ತಿದ್ದಾರೆ.  ಕೆಲವೇ ಕ್ಷಣಗಳಲ್ಲಿ ಕರುಣಾನಿಧಿ ಮೃತದೇಹವನ್ನು ಗೋಪಾಲಪುರದಲ್ಲಿರುವ ನಿವಾಸಕ್ಕೆ ಕೊಂಡೊಯ್ಯಲಾಗುವುದು.

ತಮಿಳ್ನಾಡಿನಲ್ಲಿ ನಾಳೆ ರಜೆ

ಕರುಣಾನಿಧಿ ನಿಧನದಿಂದಾಗಿ ನಾಳೆ ತಮಿಳ್ನಾಡಿನಲ್ಲಿ ರಜೆ ಘೋಷಿಸಲಾಗಿದೆ. ಒಂದು ವಾರ ದುಃಖಾಚರಣೆ ನಡೆಯಲಿದೆ

ಇದನ್ನೂ ಓದಿರಿ
ಕರುಣಾನಿಧಿ ಬದುಕಿನ ಹಾದಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ
 

 ಪ್ರಧಾನಿ ಮೋದಿ ಸಂತಾಪ 

ಕರುಣಾನಿಧಿ ಅವರ ಅಗಲಿಕೆಯ ದುಃಖದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ನಾನು ಭಾಗಿಯಾಗುತ್ತೇನೆ. ಭಾರತ ಮತ್ತು ವಿಶೇಷವಾಗಿ ತಮಿಳ್ನಾಡು ಅವರನ್ನು ಮಿಸ್ ಮಾಡಿಕೊಳ್ಳಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

 

ರಾಷ್ಟ್ರಪತಿ ಸಂತಾಪ

ಶ್ರೀ.ಎಂ ಕರುಣಾನಿಧಿ ಇನ್ನಿಲ್ಲ ಎಂಬ ಸುದ್ದಿ ತಿಳಿದು ತುಂಬಾ ಬೇಸರವಾಗಿದೆ. ತಮಿಳ್ನಾಡು ಮತ್ತು ದೇಶದ ಅಭಿವೃದ್ಧಿಗಾಗಿ ದುಡಿದ ಚೇತನ ಅವರು. ಅವರ ಅಗಲಿಕೆಯಿಂದಾಗಿ ನಮ್ಮ ದೇಶ ಬಡವಾಗಿದೆ. ಶ್ರದ್ಧಾಂಜಲಿ

 

 

ಇದು ನನ್ನ ಜೀವನದಲ್ಲಿನ ಕರಾಳ ದಿನ, ಕಲೈಂನಾರ್ ನಮ್ಮನ್ನು ಅಗಲಿದ ದಿನವನ್ನು ನಾನು ಮರೆಯಲಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ: ರಜನೀಕಾಂತ್ 

 

 

  ಸಂತಾಪ ವ್ಯಕ್ತ ಪಡಿಸಿದ ಯಡಿಯೂರಪ್ಪ

 

 ಮಹಾನ್ ನಾಯಕನ ಅಗಲಿಕೆ ಸುದ್ದಿ ಕೇಳಿ ಬೇಸರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇದು ದೇಶಕ್ಕೆ ತುಂಬಲಾರದ ನಷ್ಟ: ಅರವಿಂದ್ ಕೇಜ್ರಿವಾಲ್

 

 

ಅಮಿತ್ ಶಾ ಸಂತಾಪ

*
 

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !