ಗುರುವಾರ , ಏಪ್ರಿಲ್ 2, 2020
19 °C

ಡಿಡಿಎಲ್‌ಜೆ ಚಿತ್ರ ಸ್ಮರಿಸಿದ ಅಮೆರಿಕದ ಎರಡನೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ನಗರದ ಮೊಟೆರಾ ಕ್ರೀಡಾಂಗಣದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ‘ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ‘ ಚಿತ್ರವನ್ನು ಸ್ಮರಿಸಿದ್ದಾರೆ. 

‘ಡಿಡಿಎಲ್‌ಜೆ ಮತ್ತು ಶೋಲೆಯಂಥ ಬಾಲಿವುಡ್ ಚಿತ್ರಗಳನ್ನು ಜಗತ್ತಿನೆಲ್ಲೆಡೆಯ ಜನರು ಇಷ್ಟಪಡುತ್ತಾರೆ‘ ಎಂದು ಟ್ರಂಪ್ ಹೇಳಿದ್ದಾರೆ. ಡಿಡಿಎಲ್‌ಜೆ ಚಿತ್ರವನ್ನು ಸ್ಮರಿಸಿದ ಅಮೆರಿಕ ಅಧ್ಯಕ್ಷರಲ್ಲಿ ಟ್ರಂಪ್‌ ಎರಡನೆಯವರಾಗಿದ್ದಾರೆ. 

ಈ ಹಿಂದೆ ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಅವರು ಭಾರತ ಭೇಟಿ ಸಂದರ್ಭ ಡಿಡಿಎಲ್‌ಜೆ ಚಿತ್ರವನ್ನು ತಮ್ಮ ಭಾಷಣದಲ್ಲಿ ನೆನಪಿಸಿಕೊಂಡಿದ್ದರು. 

ಶಾರುಖ್‌ ಖಾನ್‌ ಮತ್ತು ಕಾಜೋಲ್‌ ನಟನೆಯ ಚಿತ್ರವು ಬೆಳ್ಳಿ ತೆರೆಯ ಮೇಲೆ ಹೆಚ್ಚು ವರ್ಷಗಳ ಕಾಲ ಪ್ರದರ್ಶನ ಕಂಡಿದೆ. ಯಶ್‌ ಛೋಪ್ರಾ ನಿರ್ಮಾಣದ ಚಿತ್ರವನ್ನು ಆದಿತ್ಯ ಛೋ‍ಪ್ರಾ ನಿರ್ದೇಶನ ಮಾಡಿದ್ದಾರೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು