ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 21 ಸಾವಿರ ಕೋಟಿ ರಕ್ಷಣಾ ಒಪ್ಪಂದಕ್ಕೆ ಭಾರತ–ಅಮೆರಿಕ ಸಹಿ: ಡೊನಾಲ್ಡ್ ಟ್ರಂಪ್

ಭಾರತೀಯ ನೌಕಾಪಡೆಗೆ 24, ಭೂಸೇನೆಗೆ 6 ಅತ್ಯಾಧುನಿಕ ಹೆಲಿಕಾಪ್ಟರ್‌ ಪೂರೈಸಲಿದೆ ಅಮೆರಿಕ
Last Updated 25 ಫೆಬ್ರುವರಿ 2020, 14:11 IST
ಅಕ್ಷರ ಗಾತ್ರ

ನವದೆಹಲಿ: ಮೂರು ಶತಕೋಟಿ ಡಾಲರ್ (ಸುಮಾರು ₹ 21.50 ಸಾವಿರ ಕೋಟಿ)ಮೊತ್ತದ ರಕ್ಷಣಾ ಒಪ್ಪಂದಕ್ಕೆ ಭಾರತ–ಅಮೆರಿಕ ಸಹಿ ಹಾಕಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೆರಿಕದ ಅತ್ಯಾಧುನಿಕ, ವಿಶ್ವದಲ್ಲೇ ಅತ್ಯುತ್ತಮವಾದ ‘ಎಂಎಚ್–60ಆರ್’ ಮತ್ತು ‘ಅಪಾಚೆ’ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ನೀಡುವ 3 ಶತಕೋಟಿ ಡಾಲರ್ ಒಪ್ಪಂದಕ್ಕೆ ಇಂದು ನಾವು ಸಹಿ ಹಾಕಿದೆವು. ಇದು ನಮ್ಮ ಜಂಟಿ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದೆ’ ಎಂದು ಹೇಳಿದ್ದಾರೆ.

ಟ್ರಂಪ್ ಅವರ ಭಾರತ ಭೇಟಿಯ ಎರಡನೇ ದಿನವಾದ ಮಂಗಳವಾರ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಒಪ್ಪಂದದ ಪ್ರಕಾರ, ಭಾರತೀಯ ನೌಕಾಪಡೆ ಮತ್ತು ಭೂಸೇನೆಗೆ ಒಟ್ಟು 30 ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ಅಮೆರಿಕ ಒದಗಿಸಬೇಕಿದೆ.

ಈ ಪೈಕಿ, ಭಾರತೀಯ ನೌಕಾಪಡೆಗೆ 2.12 ಶತಕೋಟಿ ಡಾಲರ್ (ಸುಮಾರು ₹ 15,000 ಕೋಟಿ) ವೆಚ್ಚದಲ್ಲಿ 24 ‘ಎಂಎಚ್–60ಆರ್’ ಹೆಲಿಕಾಪ್ಟರ್‌ಗಳನ್ನು ಅಮೆರಿಕದ ಒದಗಿಸಲಿದೆ. ಇದು ಹಳೆಯದಾಗಿರುವ ‘ಸೀ ಕಿಂಗ್’ ಹೆಲಿಕಾಪ್ಟರ್‌ಗೆ ಪರ್ಯಾಯವಾಗಲಿದೆ. ಭೂಸೇನೆಗೆ 930 ದಶಲಕ್ಷ ಡಾಲರ್ (ಸುಮಾರು ₹ 6,500 ಕೋಟಿ) ವೆಚ್ಚದಲ್ಲಿ 6 ‘ಅಪಾಚೆ’ ಹೆಲಿಕಾಪ್ಟರ್‌ಗಳನ್ನು ಪೂರೈಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT