ಸಚಿವಾಲಯಕ್ಕೆ ಸೈಕಲ್‌ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ ಹರ್ಷವರ್ಧನ್

ಸೋಮವಾರ, ಜೂನ್ 24, 2019
26 °C

ಸಚಿವಾಲಯಕ್ಕೆ ಸೈಕಲ್‌ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ ಹರ್ಷವರ್ಧನ್

Published:
Updated:

ನವದೆಹಲಿ: ಸೈಕಲ್‌ ಸವಾರಿ ಮೂಲಕ ಕಚೇರಿಗೆ ಬಂದು ಆರೋಗ್ಯದ ಕುರಿತಾಗಿ ಗಮನ ಸೆಳೆದಿದ್ದಾರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌.

ಡಾ.ಹರ್ಷವರ್ಧನ್‌ ಅವರು ಸಚಿವಾಲಯಕ್ಕೆ ಸೈಕಲ್‌ನಲ್ಲಿ ಬಂದು ನೂತನ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ರಕ್ಷಣಾ ಸಚಿವರು ಹಾಗೂ ಗೃಹ ಸಚಿವರು ಹುತಾತ್ಮ ಯೋಧರ ಸ್ಮಾರಕಗಳಿಗೆ ನಮನ ಸಲ್ಲಿಸಿ, ಬಳಿಕ ಸಚಿವಾಲಯದ ಕಚೇರಿಗಳಿಗೆ ತೆರಳಿ ಅಧಿಕಾರ ಸ್ವೀಕರಿಸಿದ್ದರು.

ವಿಶ್ವ ಸೈಕಲ್‌ ದಿನಾಚರಣೆ ಸಂದರ್ಭದಲ್ಲಿ ಸಚಿವ ಹರ್ಷವರ್ಧನ್‌ ಕಾರು ಬಿಟ್ಟು ಸೈಕಲ್‌ ಏರಿರುವುದು ಗಮನಾರ್ಗಹ ಸಂಗತಿ.

ಸೈಕಲ್‌ ತುಳಿಯುವುದು ಸರಳ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಶುದ್ಧ ಮತ್ತು ಸುಸ್ಥಿರ ಪರಿಸರಕ್ಕೆ ಸೂಕ್ತ ಮಾರ್ಗವಾಗಿದೆ ಎಂದು ಸಚಿವ ಹರ್ಷವರ್ಧನ್‌ ಟ್ವೀಟ್‌ ಮಾಡಿದ್ದಾರೆ.

ಜೂನ್‌ 3 ವಿಶ್ವ ಬೈಸಿಕಲ್‌ ದಿನ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ಘೋಷಿಸಿದೆ. ಈ ದಿನದಂದು ಸೈಕಲ್‌ ಬಳಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಿ. ಪರಿಸರ ಉಳಿವು ಮತ್ತು ವಾಯು ಮಾಲಿನ್ಯ ತಡೆಗೆ ಸೈಕಲ್‌ ಓಡಿಸುವುದು ನಮ್ಮ ನೆಚ್ಚಿನ ಕ್ರೀಡೆ ಎಂದು ಮುಂದುವರಿಯುವ ಅಗತ್ಯವಿದೆ ಎಂದು ಹೇಳಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !