ಶುಕ್ರವಾರ, ಫೆಬ್ರವರಿ 26, 2021
32 °C

ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ವಿರುದ್ಧ ಮತ ಸಮೀಕ್ಷೆ: ಮಾಳವೀಯಗೆ ತರಾಟೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಅವರ ವಿರುದ್ಧ ಆನ್‌ಲೈನ್ ಮತ ಸಮೀಕ್ಷೆ ನಡೆಸಿದ್ದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರನ್ನು ಶನಿವಾರ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತರಾಟೆಗೆ ತೆಗೆದುಕೊಂಡಿದ್ದು, ಮಾಳವೀಯ ಕೂಡಲೇ ಆನ್‌ಲೈನ್ ಮತ ಸಮೀಕ್ಷೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದೆ.  

ಶುಕ್ರವಾರ ಮಾಳವೀಯ ಟ್ವಿಟರ್‌ ನಲ್ಲಿ ‘ರಾಜ್‌ದೀಪ್ ಸರ್‌ ದೇಸಾಯಿ ಅವರು ಐಸಿಸ್‌ ಪಿಆರ್ ಆಗಿ ಕಾರ್ಯ
ನಿರ್ವಹಿಸಬೇಕೇ?’ ಎಂದು ಆನ್‌ಲೈನ್‌ನಲ್ಲಿ ಮತ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಗಾಗಿ ಟ್ವಿಟರ್ ಬಳಕೆದಾರರಿಗೆ ಮತ ಚಲಾಯಿಸಲು ಒಪ್ಪಿಗೆ, ಬಲವಾಗಿ ಒಪ್ಪಿಗೆ, ಒಪ್ಪುವುದಿಲ್ಲ, ಅಪ್ರಸ್ತುತ ಎನ್ನುವ ನಾಲ್ಕು ಆಯ್ಕೆಗಳನ್ನು ಮಾಳವೀಯ ನೀಡಿದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು