ಗುರುವಾರ , ಜುಲೈ 29, 2021
21 °C

ರಾಜ್ಯಸಭೆಯ 18 ಸ್ಥಾನಗಳಿಗೆ ಜೂನ್ 19ಕ್ಕೆ ಚುನಾವಣೆ: ಆಯೋಗ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Election

ನವದೆಹಲಿ: ರಾಜ್ಯಸಭೆಯ 18 ಸ್ಥಾನಗಳಿಗೆ ಬಾಕಿ ಇರುವ ಚುನಾವಣೆಯನ್ನು ಜೂನ್ 19ರಂದು ನಡೆಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಈ ಹಿಂದೆ ಮಾರ್ಚ್‌ 26ರಂದು ಚುನಾವಣೆ ನಿಗದಿಯಾಗಿತ್ತು. ಆದರೆ, ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು.

‘ಆಂಧ್ರ ಪ್ರದೇಶ (4), ಗುಜರಾತ್ (4), ಜಾರ್ಖಂಡ್ (2), ಮಧ್ಯ ಪ್ರದೇಶ (3), ಮಣಿಪುರ (1), ಮೇಘಾಲಯ (1) ಹಾಗೂ ರಾಜಸ್ಥಾನದಿಂದ (3) ತೆರವಾಗಿರುವ ಸ್ಥಾನಗಳಿಗೆ ಮತದಾನ ಮತ್ತು ಮತ ಎಣಿಕೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

ಚುನಾವಣೆಯ ದಿನವೇ ಸಂಜೆ 5 ಗಂಟೆಗೆ ಮತ ಎಣಿಕೆಯೂ ನಡೆಯಲಿದೆ ಎಂದು ಆಯೋಗ ಹೇಳಿದೆ.

ಇದನ್ನೂ ಓದಿ: ರಾಜ್ಯಸಭೆಗೆ ದೇವೇಗೌಡ: ಸುಲಭದ ತುತ್ತಲ್ಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು