ಇವಿಎಂಗೆ ಕನ್ನ: ದೆಹಲಿ ಪೊಲೀಸರಿಂದ ಎಫ್‌ಐಆರ್

7

ಇವಿಎಂಗೆ ಕನ್ನ: ದೆಹಲಿ ಪೊಲೀಸರಿಂದ ಎಫ್‌ಐಆರ್

Published:
Updated:

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚಲು ಸಾಧ್ಯ ಎಂದು ಹೇಳಿಕೆ ನೀಡಿದ್ದ ಸೈಬರ್ ತಜ್ಞ ಸೈಯದ್ ಶುಜಾ ವಿರುದ್ಧ ಚುನಾವಣಾ ಆಯೋಗ ನೀಡಿದ್ದ ದೂರು ಆಧರಿಸಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 

‘ಶುಜಾ ವಿರುದ್ಧ ಸೆಕ್ಷನ್ 505 ಅಡಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ. 

ಸೈಬರ್ ತಂತ್ರಜ್ಞಾನದ ಅರಿವು ಬೇಕಿರುವ ಹಾಗೂ ವಿಸ್ತೃತ ತನಿಖೆ ಅಗತ್ಯವಿರುವುದರಿಂದ ವಿಶೇಷ ತನಿಖಾ ಸಂಸ್ಥೆಯೇ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ. 

‘2014ರ ಲೋಕಸಭಾ ಚುಣಾವಣೆ ವೇಳೆ ಇವಿಎಂಗೆ ಕನ್ನ ಹಾಕಲಾಗಿತ್ತು. ಇವಿಎಂಗಳನ್ನು ತಿರುಚಬಹುದು’ ಎಂದು ಶುಜಾ ಅವರು ಲಂಡನ್‌ನಲ್ಲಿ ಸೋಮವಾರ ಹೇಳಿಕೆ ನೀಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !