ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್: ಕೇರಳ ಪ್ರವಾಹದ ವೈಮಾನಿಕ ಸಮೀಕ್ಷೆ ವೇಳೆ ಸಮೋಸ ಸವಿದರೇ ರಾಹುಲ್?

Last Updated 18 ಆಗಸ್ಟ್ 2019, 6:50 IST
ಅಕ್ಷರ ಗಾತ್ರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ವಿಶೇಷ ವಿಮಾನದಲ್ಲಿ ಸಮೋಸ ಸವಿಯುತ್ತಿರುವ ವಿಡಿಯೊವೊಂದು ಸಾಕಷ್ಟು ವೈರಲ್‌ ಆಗುತ್ತಿದೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಲೇಖಕಿ ಮಧುಪೂರ್ಣಿಮಾ ಕಿಸ್ವಾರ್‌ ಎನ್ನುವವರು,‘ಪ್ರವಾಹ ಸಂತ್ರಸ್ತ ಕೇರಳದ ವೈಮಾನಿಕ ಸಮೀಕ್ಷೆ ಸಂದರ್ಭವಯನಾಡ್‌ ಸಂಸದರು ಸಮೋಸ ಸವಿಯುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ವಿಡಿಯೊ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಆದ ಕೆಲವೇ ನಿಮಿಷಗಳಲ್ಲಿ 10ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಆದರೆ, ಅದು ಈಗಿನ ವಿಡಿಯೊ ಅಲ್ಲ ಎಂಬುದು ಫ್ಯಾಕ್ಟ್‌ಚೆಕ್‌ ಬಳಿಕ ತಿಳಿದು ಬಂದಿದೆ. ಸುಳ್ಳುಸುದ್ದಿ ವಿರುದ್ಧನೆಟ್ಟಿಗರುಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತಕೊಂಡಿರುವ ಕಿಸ್ವಾರ್‌ತಮ್ಮ ಪೋಸ್ಟ್‌ ಡಿಲಿಟ್‌ ಮಾಡಿದ್ದಾರೆ.


(ಈಗ ಹರಿದಾಡುತ್ತಿರುವ ವಿಡಿಯೊ)

ಸತ್ಯ ಏನು?
ಈ ವಿಡಿಯೊ ರಾಹುಲ್‌ ಗಾಂಧಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ ಸಂದರ್ಭದಲ್ಲ. ಇದೇ ವರ್ಷ ಏಪ್ರಿಲ್‌ನಲ್ಲಿ(ಲೋಕಸಭೆ ಚುನಾವಣೆ ಸಂದರ್ಭ) ಉತ್ತರ ಪ್ರದೇಶದ ಅಮೇಥಿಯಿಂದ ಮಧ್ಯಪ್ರದೇಶಕ್ಕೆಚುನಾವಣಾ ಪ್ರಚಾರದ ಸಲುವಾಗಿ ತೆರಳುತ್ತಿದ್ದ ಸಮಯದ್ದು.

ಇದನ್ನು ಖಚಿತ ಪಡಿಸುವ ಹಲವು ವಿಡಿಯೊಗಳು ಯುಟ್ಯೂಬ್‌ನಲ್ಲಿವೆ. ಏಪ್ರಿಲ್‌ 24ರಲ್ಲೇ ಅಪ್‌ಲೋಡ್‌ ಆಗಿರುವ ವಿಡಿಯೊಗಳಲ್ಲಿ, ರಾಹುಲ್‌ ತಮ್ಮ ಸಿಬ್ಬಂದಿ ಜೊತೆ ಬಂದು ವಿಮಾನ ಏರುವುದು, ಎಲ್ಲರಿಗೂ ಸಮೋಸ ವಿತರಿಸುವುದು ಹಾಗೂ ಇನ್ನಿತರ ದೃಶ್ಯಾವಳಿಗಳು ಸೆರೆಯಾಗಿವೆ.

ಈ ಹಿಂದೆಯೂ ಸುಳ್ಳುಸುದ್ದಿ ಹರಿಬಿಟ್ಟಿದ್ದಕಿಸ್ವಾರ್‌
ಮಾರ್ಚ್‌ 21

ಲೋಕಸಭೆ ಚುನಾವಣೆ ಸಂದರ್ಭ ಡಿಎಂಕೆ ಪಕ್ಷವು ಹೊರಡಿಸಿರುವ ತನ್ನ ಪ್ರಣಾಳಿಕೆಯಲ್ಲಿ ಹಿಂದೂ ವಿರೋಧಿ ನಿಲುವು ತಳೆದಿದೆ ಎಂದು ಟ್ವೀಟ್‌ ಮಾಡಿದ್ದರು. ಮಾರ್ಚ್‌ 21ರಂದು ಅವರು ಪ್ರಕಟಿಸಿದ್ದ ಟ್ವೀಟ್‌ನಲ್ಲಿ, ‘ಹಿಂದೂ ದೇವಾಲಯಗಳ ಭೂಮಿಯನ್ನು ಅತಿಕ್ರಮಿಸಿಕೊಂಡಿರುವುವರ ಹೆಸರಿಗೇ ಆ ಭೂಮಿಯನ್ನು ನೋಂದಾಯಿಸಿಕೊಡಲಾಗುವುದು ಎಂದುಪ್ರಣಾಳಿಕೆಯ 85 ಪುಟದಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೆ 112ನೇ ಪುಟದಲ್ಲಿ ಮುಸ್ಲಿಂ ವಕ್ಫ್‌ ಮಂಡಳಿ ಅತಿಕ್ರಮಿಸಿಕೊಂಡಿದ್ದ ಭೂಮಿಯನ್ನು ಈ ಹಿಂದೆ ಸರ್ಕಾರ ವಶಕ್ಕೆ ಪಡೆದಿತ್ತು. ಅದನ್ನು ಮತ್ತೆಮಂಡಳಿಗೇ ನೀಡಲಾಗುವುದು ಎಂದು ತಿಳಿಸಿದೆ. ಆ ಮೂಲಕ ಹಿಂದೂ ವಿರೋಧಿ ನಿಲುವು ತಳೆಯಲಾಗಿದೆ’ ಎಂದು ಟ್ವೀಟ್‌ ಮಾಡಿದ್ದರು.

ಅಂದಹಾಗೆ ಡಿಎಂಕೆ ಚುನಾವಣೆ ಪ್ರಣಾಳಿಕೆಯಲ್ಲಿ 85 ಮತ್ತು 112ನೇ ಪುಟಗಳೇ ಇಲ್ಲ. ಏಕೆಂದರೆ ಚುನಾವಣೆ ಪ್ರಣಾಳಿಕೆ ಇದ್ದದ್ದೇ76 ಪುಟ. ಬಳಿಕಡಿಎಂಕೆ ವಕ್ತಾರ ಮನುರಾಜ್‌ ಎಸ್‌. ಅವರು ಟ್ವಿಟರ್‌ನಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗಿದೆ ಎಂದು ಮಾಹಿತಿ ನೀಡಿದ್ದರು.

ಮೇ 2018
ಮೇ 2018 ರಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಶೇಷ್‌ಪಾಲ್‌ ವೇದ್‌ ಅವರು ‘ಜಿಹಾದಿ ರಾಜಕಾರಣಿಗಳ ಮನೆಯ ಬಾಗಿಲು ಕಾಯುತ್ತಿದ್ದರು’ ಎಂದು ದೂರಿದ್ದರು. ಹಿಜ್ಬುಲ್‌ ಮುಜಾಹಿದಿನ್‌ ಸಂಘಟನೆಯ ಉಗ್ರ ಬರ್ಹಾನ್‌ ವಾನಿ ಎನ್‌ಕೌಂಟರ್‌ನಿಂದ ಬೇಸರಗೊಂಡಿದ್ದಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ವೇದ್‌ ಅವರನ್ನು ಅಮಾನತು ಮಾಡಿದ್ದರು ಎಂದು ವದಂತಿ ಹರಡಲಾಗಿತ್ತು.

ವಾಸ್ತವವೇನೆಂದರೆ, ಹಿಜ್ಬುಲ್‌ ಮುಜಾಹಿದಿನ್‌ ಸಂಘಟನೆಯ ಉಗ್ರ ಬರ್ಹಾನ್‌ ವಾನಿಯ ಎನ್‌ಕೌಂಟರ್‌ ನಡೆದದ್ದು2016ರ ಜುಲೈ ತಿಂಗಳಲ್ಲಿ. ಶೇಷ್‌ ಪಾಲ್‌ ವೇದ್‌ ಅವರು ಕಣಿವೆ ರಾಜ್ಯದಪೊಲೀಸ್‌ ಮಹಾನಿರ್ದೇಶಕರಾಗಿ ನೇಮಕವಾಗಿದ್ದು 2016ರ ಸೆಪ್ಟೆಂಬರ್‌ ತಿಂಗಳಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT