ಗುರುವಾರ , ಫೆಬ್ರವರಿ 27, 2020
19 °C

ಕೊರೊನಾ ಭಯ: ಕುಟುಂಬದವರಿಗೆ ಸೋಂಕು ಹರಡುವ ಭಯದಿಂದ ವ್ಯಕ್ತಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

suicide

ತಿರುಪತಿ: ತನಗೆ ಕೊರೊನಾ ವೈರಸ್‌ ತಗುಲಿದೆ ಎಂದು ಭಾವಿಸಿ ಆತಂಕಗೊಂಡ 50 ವರ್ಷ ಪ್ರಾಯದ ವ್ಯಕ್ತಿಯೊಬ್ಬರು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ತುರೂ ಜಿಲ್ಲೆಯಲ್ಲಿ ನಡೆದಿದೆ.

ಎರಡು ದಿನಗಳಿಂದ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಾಲಕೃಷ್ಣ ಗುಣಮುಖರಾಗಿ ಮನೆಗೆ ಮರಳಿದ್ದರು. ತನಗೆ ಕೊರೊನಾ ವೈರಸ್‌ ತಗುಲಿದೆ ಎಂದು ಭಾವಿಸಿ ಕುಟುಂಬದವರಿಗೆ ಹರಡುವುದನ್ನು ತಪ್ಪಿಸಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

'ಒಬ್ಬಂಟಿಯಾಗಿದ್ದ ಅವರು ತನಗೆ ಕೊರೊನಾ ವೈರಸ್ ಸೋಂಕು ತಗಲಿದೆ ತನ್ನಿಂದ ದೂರ ಹೋಗುವಂತೆ ಕುಟುಂಬದವರಲ್ಲಿ ಹೇಳುತ್ತಿದ್ದರು, ಕುಟುಂಬದವರು ಸಂಪರ್ಕಿಸಲು ಯತ್ನಿಸಿದಾಗ ಕೋಪಗೊಳ್ಳುತ್ತಿದ್ದರು, ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆಯುತ್ತಿದ್ದರು, ತನ್ನನ್ನು ತಾನೇ ಕೊಠಡಿಯಲ್ಲಿ ಕೂಡಿಹಾಕಿಕೊಂಡಿದ್ದರು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪೆಂಚಾಲಯ್ಯ ಹೇಳಿದ್ದಾರೆ 

ಕೊರೊನಾ ವೈರಸ್‌ ಸೋಂಕಿನ ಸಂಬಂಧಿಸಿದ ನ್ಯೂಸ್‌ಗಳನ್ನು ನಿರಂತರವಾಗಿ ಓದುತ್ತಿದ್ದರು, ಮಾನಸಿಕವಾಗಿ ಕುಗ್ಗಿದ್ದರು ಎಂದು ಅವರ ಮಕ್ಕಳು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು