ಶೋಪಿಯಾನ್ ಎನ್‍ಕೌಂಟರ್: 5 ಉಗ್ರರ ಹತ್ಯೆ, ಮುಂದುವರಿದ ಕಾರ್ಯಾಚರಣೆ

7

ಶೋಪಿಯಾನ್ ಎನ್‍ಕೌಂಟರ್: 5 ಉಗ್ರರ ಹತ್ಯೆ, ಮುಂದುವರಿದ ಕಾರ್ಯಾಚರಣೆ

Published:
Updated:

ಶ್ರೀನಗರ: ಜಮ್ಮ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, 5 ಉಗ್ರರನ್ನು ಹತ್ಯೆ ಮಾಡಲಾಗಿದೆ. ಗುರುವಾರದಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆದು ಬರುತ್ತಿದ್ದು, ಹತ್ಯೆಯಾದ ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಯವರು ಎಂದು ಹೇಳಲಾಗಿದೆ.

ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಉಗ್ರರಿಗಾಗಿ ಶೋಧ ನಡೆಸಿತ್ತು. ಈ ವೇಳೆ ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದಾಗ ಶೋಧ ಕಾರ್ಯ ಎನ್‍ಕೌಂಟರ್ ಗೆ ತಿರುಗಿತು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಎನ್‍ಕೌಂಟರ್ ನಡೆದ ಸ್ಥಳದಲ್ಲಿ ಉಗ್ರರ ನಾಲ್ಕು ಶವಗಳು ಪತ್ತೆಯಾಗಿದ್ದು, ಒಟ್ಟು 5 ಉಗ್ರರನ್ನು ಹತ್ಯೆ ಮಾಡಿದ್ದೇವೆ ಎಂದು ಜಮ್ಮು ಕಾಶ್ಮೀರದ ಪೊಲೀಸ್‌ ಮಹಾನಿರ್ದೇಶಕ ಎಸ್‌.ಪಿ.ವೇದ್‌ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !