ಶುಕ್ರವಾರ, ಆಗಸ್ಟ್ 23, 2019
26 °C
ನವದೆಹಲಿ

ಹಿರಿಯ ರಾಜಕಾರಣಿ ಶೀಲಾ ದೀಕ್ಷಿತ್‌ ನಿಧನ

Published:
Updated:

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌(81) ಅವರು ಶನಿವಾರ ನಿಧನರಾದರು.

ಹಿರಿಯ ಕಾಂಗ್ರೆಸ್‌ ಮುಖಂಡರಾಗಿದ್ದ ಶೀಲಾ ದೀಕ್ಷಿತ್‌ ಅವರು 1998 ರಿಂದ 2013ರವರೆಗೆ ದೆಹಲಿ ಮುಖ್ಯಮಂತ್ರಿ­ಯಾಗಿದ್ದರು.

2014ರಲ್ಲಿ ಕೇರಳಾ ರಾಜ್ಯಪಾಲರಾಗಿ(ಮಾರ್ಚ್‌–ಆಗಸ್ಟ್ ವರೆಗೆ) ಸೇವೆ ಸಲ್ಲಿಸಿದ್ದರು. 2019ರ ಜನವರಿಯಲ್ಲಿ ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿಯ(ಡಿಪಿಸಿಸಿ) ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. 

81ನೇ ವಯಸ್ಸಿನಲ್ಲಿ ದೆಹಲಿ ಈಶಾನ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಮೂಲಕ ಶೀಲಾ ದೀಕ್ಷಿತ್‌ ಒಮ್ಮೆಲೇ ರಾಷ್ಟ್ರದ ಗಮನ ಸೆಳೆದಿದ್ದರು. 

ಇದನ್ನೂ ಓದಿ: ಶೀಲಾ ದೀಕ್ಷಿತ್‌ ನಿಧನ; ಪ್ರಧಾನಿ ಮೋದಿ, ರಾಹುಲ್‌, ಕೇಜ್ರಿವಾಲ್‌ ಸಂತಾಪ 

ಜನನ: 1938 ಮಾರ್ಚ್‌ 31

ಸ್ಥಳ: ಪಂಜಾಬ್‌ನ ಕಪುರ್ತಲ

ವಿದ್ಯಾಭ್ಯಾಸ: ಎಂ.ಎ(ಇತಿಹಾಸ)

ಇದನ್ನೂ ಓದಿ: ಇಂದಿರಾ ಗಾಂಧಿ ಗಮನ ಸೆಳೆದಿದ್ದ ಶೀಲಾ; ರಾಜಕೀಯ ಪ್ರವೇಶ ಆಕಸ್ಮಿಕ

ಅನಾರೋಗ್ಯದಿಂದ ಎಸ್ಕಾರ್ಟ್ಸ್ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿದ್ದ ಶೀಲಾ ದೀಕ್ಷಿತ್‌ ಅವರಿಗೆ ಮಧ್ಯಾಹ್ನ 3:15ಕ್ಕೆ ಹೃದಯಾಘಾತ ಉಂಟಾಗಿತ್ತು. ಕೃತಕ ಉಸಿರಾಟ ವ್ಯವಸ್ಥೆಯಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, 3:55ಕ್ಕೆ ಅವರು ನಿಧನರಾದರು ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಅಶೋಕ್‌ ಸೇಠ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. 

ಇದನ್ನೂ ಓದಿ: ದೆಹಲಿ ಗದ್ದುಗೆ ಏರಿದ ಪಂಜಾಬಿನ ಕಪುರ್ತಲಾದ ಸಜ್ಜನ ರಾಜಕಾರಣಿ... 

Post Comments (+)